ರಾಹುಲ್ ಬಜ್ಜಿ ತಿಂದ ಹೋಟೆಲ್‌ಗೆ ಈಗ ಅವರದ್ದೇ ಹೆಸರು ನಾಮಕರಣ! ವ್ಯಾಪಾರವೂ ಭರ್ಜರಿ!

First Published 16, Feb 2018, 10:23 AM IST
Rahul Gandhi Canteen
Highlights

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಾಶೀರ್ವಾದ ಯಾತ್ರೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಿರ್ಚಿ ಮಂಡಕ್ಕಿ ಸವಿದಿದ್ದ ಪುಟ್ಟ ಕಲ್ಮಲಾದ ಗೂಡಂಗಡಿ ಹೋಟೆಲ್ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಹುಲ್ ಭೇಟಿಯಿಂದ ದೇಶಕ್ಕೇ ಪರಿಚಯವಾದ ಈ ಹೋಟೆಲ್‌ಗೆ ‘ರಾಹುಲ್ ಗಾಂಧಿ ಕ್ಯಾಂಟಿನ್’ ಎಂದು ನಾಮಕರಣ ಮಾಡಲು
ಮಾಲೀಕರು ನಿರ್ಧರಿಸಿದ್ದಾರೆ.

ರಾಯಚೂರು (ಫೆ.16): ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಾಶೀರ್ವಾದ ಯಾತ್ರೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಿರ್ಚಿ ಮಂಡಕ್ಕಿ ಸವಿದಿದ್ದ ಪುಟ್ಟ ಕಲ್ಮಲಾದ ಗೂಡಂಗಡಿ ಹೋಟೆಲ್ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಹುಲ್ ಭೇಟಿಯಿಂದ ದೇಶಕ್ಕೇ ಪರಿಚಯವಾದ ಈ ಹೋಟೆಲ್‌ಗೆ ‘ರಾಹುಲ್ ಗಾಂಧಿ ಕ್ಯಾಂಟಿನ್’ ಎಂದು ನಾಮಕರಣ ಮಾಡಲು
ಮಾಲೀಕರು ನಿರ್ಧರಿಸಿದ್ದಾರೆ.

ಜನಾಶೀರ್ವಾದ ಯಾತ್ರೆಯ 3 ನೇ ದಿನ ಅಂದರೆ ಫೆ.12 ರಂದು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಎಚ್.ಎಂ.ರೇವಣ್ಣ ಸೇರಿ ಇತರರು ರಾಯಚೂರಿನಿಂದ ದೇವದುರ್ಗಕ್ಕೆ ತೆರಳುವಾಗ ಕಲ್ಮಲಾ ಗ್ರಾಮದ ಈ ಟಿನ್ ಶೆಡ್ಡಿನ ಪುಟ್ಟ ಹೋಟೆಲ್‌ನಲ್ಲಿ ಮಂಡಕ್ಕಿ ಒಗ್ಗರಣಿ, ಮಿರ್ಚಿ
ಭಜ್ಜಿಯನ್ನು ಸವಿದಿದ್ದರು. ಅಲ್ಲದೆ ಹೋಟೆಲ್ ಮಾಲೀಕ ಮೌಲಾಸಾಬ್ ಮತ್ತು ಹೋಟೆಲ್‌ನಲ್ಲಿದ್ದ ಮಹಿಳೆಯ ಕುಶಲೋಪರಿ ವಿಚಾರಿಸಿದ್ದರು.

ರಾಹುಲ್ ಗಾಂಧಿ ಅವರ ಭೇಟಿಯಿಂದಾಗಿ ದಿನಬೆಳಗಾಗುವುದರೊಳಗೆ ಮೌಲಾಸಾಬ್ ಅವರ ಹೋಟೆಲ್ ದೇಶಾದ್ಯಂತ ಪರಿಚಿತವಾಗಿದ್ದು, ಅದೃಷ್ಟವೇ ಕುಲಾಯಿಸಿದೆ. ನಿತ್ಯ 1000 ರಿಂದ 1800 ರು. ವ್ಯಾಪಾರ
ಆಗುತ್ತಿದ್ದ ಹೋಟೆಲ್‌ನಲ್ಲಿ ಈಗ 3000 ರೂ.ವರೆಗೆ ವಹಿವಾಟು ನಡೆಯುತ್ತಿದೆ. ಮೊದಲಿಗೆ ಅಬ್ಬಾಖಾನ್ ಹೋಟೆಲ್ ಎಂದು ಕರೆಯುತ್ತಿದ್ದ ಊರಿನ ಜನ ರಾಹುಲ್ ಭೇಟಿ ಬಳಿಕ ‘ರಾಹುಲ್ ಗಾಂಧಿ ಹೋಟೆಲ್’ ಎಂದೇ
ಕರೆಯುತ್ತಿದ್ದಾರೆ. ಹೀಗಾಗಿ, ರಾಹುಲ್ ಭೇಟಿಯ ನೆನಪಿನಾರ್ಥವಾಗಿ ಹೋಟೆಲ್‌ಗೆ ರಾಹುಲ್‌ಗಾಂಧಿ ಅವರ ಹೆಸರನ್ನಿಟ್ಟು ಅವರಿಗೆ ಕೃತಜ್ಞತೆ  ಸಲ್ಲಿಸಲು ಮಾಲೀಕರು ಮುಂದಾಗಿದ್ದಾರೆ. 

loader