ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ | ಮೋದಿಯಿಂದ ದೇಶ ಲೂಟಿ: ರಾಹುಲ್ ಗಾಂಧಿ

Rahul Gandhi Attacks PM Modi Over PNB Scam
Highlights

  • ಟ್ವೀಟರ್’ನಲ್ಲಿ ಕವನವೊಂದರ ಮೂಲಕ ಮೋದಿ ವಿರುದ್ಧ ಟೀಕಾಪ್ರಹಾರ
  • #ModiRobsIndia ಎಂಬ ಹ್ಯಾಶ್’ಟ್ಯಾ ಗ್

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ಹಗರಣಕ್ಕೆ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟರ್’ನಲ್ಲಿ ಕವನವೊಂದರ ಮೂಲಕ ಮೋದಿ ವಿರುದ್ಧ ಟೀಕಾಪ್ರಹಾರಗೈದಿರುವ ರಾಹುಲ್ ಗಾಂಧಿ, 

ಮೊದಲು ಲಲಿತ್ ಮೋದಿ, ಬಳಿಕ ಮಲ್ಯ

ಇದೀಗ ನೀರವ್ ಕೂಡಾ ಪರಾರಿ

‘ತಿನ್ನಲ್ಲ, ತಿನ್ನಕ್ಕೂ ಬಿಡಲ್ಲ’  ಎನ್ನುವ ಪಹರೆದಾರ ಎಲ್ಲಿದ್ದಾರೆ?

ಸಾಹೇಬರ ಮೌನದ ಹಿಂದಿನ ರಹಸ್ಯ ತಿಳಿಯಲು ಜನರು ಕಾತರರಾಗಿದ್ದಾರೆ

ಅವರ ಮೌನವೇ ಕೂಗಿ ಕೂಗಿ ಹೇಳುತ್ತಿದೆ..

ಅವರು ಯಾರಿಗೆ ನಿಷ್ಠಾವಂತರೆಂದು! 

ಎಂದು ಟಾಂಗ್ ನೀಡಿದ್ದಾರೆ. ಜೊತೆಗೆ #ModiRobsIndia ಎಂಬ ಹ್ಯಾಶ್’ಟ್ಯಾಗನ್ನು ಕೂಡಾ ಬಳಸಿದ್ದಾರೆ.

ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಅವರ ಕುಟುಂಬ ವರ್ಗ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 11400 ಕೋಟಿ ರು. ವಂಚಸಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ನೀರವ್ ಕಂಪನಿ, ಬ್ಯಾಂಕ್‌ಗೆ ಹಣಕಾಸು ವಂಚನೆ ಮಾಡಿದ್ದು ಮಾತ್ರವಲ್ಲ, ಬ್ಯಾಂಕ್‌ನ ಕಂಪ್ಯೂಟರ್‌ಗಳಿಗೇ ಕನ್ನ ಹಾಕಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

ನೀರವ್ ಮೋದಿ ಪ್ರಧಾನಿ ಮೋದಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ನೀರವ್ ಮೋದಿ ಹಗರಣದ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಗೊತ್ತಿದ್ದರೂ, ಅವರ ವಿರುದ್ಧ ಕ್ರಮಕೈಗೊಳ್ಳದೇ ಅವರಿಗೆ ಪರಾರಿಯಾಗಲು ಸಹಕರಿಸಿದೆ ಎಂದು ಪ್ರತಿಪಕ್ಷಗಳು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ.

 

loader