ಕಾಂಗ್ರೆಸ್ ಪಕ್ಷದ 132ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡುತ್ತಿದ್ದ ರಾಹುಲ್, ಎಷ್ಟು ಕಪ್ಪುಹಣವನ್ನು ವಾಪಸ್ ತರಿಸಿದ್ದೀರಿ ಎಂಬ ಲೆಕ್ಕ ಕೊಡಿ ಎಂದು ಪ್ರಧಾನಿಗಳನ್ನು ಆಗ್ರಹಿಸಿದ್ದಾರೆ.
ನವದೆಹಲಿ(ಡಿ. 28): ಕೇಂದ್ರ ಸರಕಾರದ ನೋಟ್ ಬ್ಯಾನ್ ನಿರ್ಧಾರವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೋಟ್ ನಿಷೇಧ ಮಾಡುವ ಮೂಲಕ ಬಡವರಿಂದ ಹಣವನ್ನು ಲೂಟಿ ಮಾಡಲಾಗುತ್ತಿದೆಯೇ ಹೊರತು, ಕಾಳಧನಿಕರನ್ನು ಆರಾಮವಾಗಿರಲು ಬಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ವಿಷಾದಿಸಿದ್ದಾರೆ. ಕಾಂಗ್ರೆಸ್ ಪಕ್ಷದ 132ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡುತ್ತಿದ್ದ ರಾಹುಲ್, ಎಷ್ಟು ಕಪ್ಪುಹಣವನ್ನು ವಾಪಸ್ ತರಿಸಿದ್ದೀರಿ ಎಂಬ ಲೆಕ್ಕ ಕೊಡಿ ಎಂದು ಪ್ರಧಾನಿಗಳನ್ನು ಆಗ್ರಹಿಸಿದ್ದಾರೆ.
ಮೋದಿಗೆ ರಾಹುಲ್ ಪ್ರಶ್ನೆಗಳು:
1) ನೋಟ್ ಬ್ಯಾನ್ ಆದ ನ. 8ರ ನಂತರ ಎಷ್ಟೆಷ್ಟು ಕಪ್ಪುಹಣ ಸಿಕ್ಕಿಬಿದ್ದವು?
2) ಆರ್ಥಿಕತೆಗೆ ಎಷ್ಟು ನಷ್ಟ ಆಗಿದೆ?
3) ನೋಟ್ ಬ್ಯಾನ್ ನಿರ್ಧಾರದಿಂದ ನ.8ರ ನಂತರ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ? ಅವರಿಗೆಲ್ಲಾ ಪರಿಹಾರ ನೀಡಲಾಗಿದೆಯಾ?
4) ನೋಟ್ ಬ್ಯಾನ್ ನಿರ್ಧಾರ ಕೈಗೊಳ್ಳಲು ಪ್ರಧಾನಿಯವರು ಯಾವ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದರು?
ರಾಹುಲ್ ಸಿಡಿನುಡಿಗಳು:
* 50 ಕುಟುಂಬಗಳು ಹಾಗೂ ದೇಶದ 1% ಸಿರಿವಂತರಿಗೋಸ್ಕರ ಮೋದಿಜೀ ನೋಟ್'ಬ್ಯಾನ್ 'ಯಜ್ಞ' ಮಾಡಿದ್ದಾರೆ.
* ನೋಟ್ ಬ್ಯಾನ್ ಕ್ರಮವು ಜನರಲ್ಲಿ ಮೋದಿ ಸರಕಾರ ಭೀತಿ ಸೃಷ್ಟಿಸುತ್ತಿರುವುದಕ್ಕೆ ಒಂದು ಉದಾಹರಣೆ.
* ನೋಟ್ ಬ್ಯಾನ್ ಮಾಡುವುದರ ಮೂಲಕ ಮೋದಿ ಸರಕಾರವು ಜನರಿಂದ ಹಣವನ್ನು ಲೂಟಿ ಮಾಡುತ್ತಿದೆ.
