ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿ  ಭಾಷಣ ಮಾಡುತ್ತಾ,  ಗ್ಯಾಸ್ ಬಲೂನ್ ಸ್ಪೋಟ ಪ್ರಕರಣ ನೆನೆಸಿಕೊಂಡಿದ್ದಾರೆ.   ಗ್ಯಾಸ್ ಬಲೂನ್  ಸ್ಪೋಟದಲ್ಲಿ ಗಾಯಗೊಂಡವರಿಗೆ ತಲಾ 25 ಸಾವಿರ ನೀಡುವುದಾಗಿ   ಘೋಷಣೆ ಮಾಡಿದ್ದಾರೆ. 

ಶ್ರೀರಂಗಪಟ್ಟಣ (ಮಾ. 25): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಮಾಡುತ್ತಾ, ಗ್ಯಾಸ್ ಬಲೂನ್ ಸ್ಪೋಟ ಪ್ರಕರಣ ನೆನೆಸಿಕೊಂಡಿದ್ದಾರೆ. ಗ್ಯಾಸ್ ಬಲೂನ್ ಸ್ಪೋಟದಲ್ಲಿ ಗಾಯಗೊಂಡವರಿಗೆ ತಲಾ 25 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಎಂದಿನಂತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಹೋದಲ್ಲೆಲ್ಲಾ ಸುಳ್ಳು ಹೇಳುತ್ತಾರೆ. ಎಲ್ಲರಿಗೂ ಉದ್ಯೋಗ ಕಲ್ಪಿಸುತ್ತೇನೆ. ಪ್ರತಿ‌ ವ್ಯಕ್ತಿ ಖಾತೆಗೆ 15 ಲಕ್ಷ ಹಾಕ್ತೀನಿ‌ ಎಂದು ಸುಳ್ಳು ಹೇಳ್ತಾರೆ. ವೇದಿಕೆ ಮೇಲೆ ಭ್ರಷ್ಟಾಚಾರದ ನಾಯಕರನ್ನ ಕೂರಿಸಿಕೊಂಡು ಭ್ರಷ್ಟಾಚಾರ ವಿರೋಧಿ ಭಾಷಣ ಮಾಡ್ತಾರೆ ಎಂದು ರಾಗಾ ಟೀಕಿಸಿದ್ದಾರೆ. 

ಮೋದಿಯವರು ರೈತರ ಸಾಲ ಮನ್ನ ಮಾಡಿಲ್ಲ. ದೊಡ್ಡ ವ್ಯಾಪಾರಿಗಳ ಸಾಲ ಮನ್ನಾ ಮಾಡಿದಾರೆ. ಮೊನ್ನೆ ಮೋದಿ ಕಛೇರಿಗೆ ಹೋಗಿ ನಾನು ಪ್ರಶ್ನೆ ಮಾಡಿದೆ ಯಾಕೆ ರೈತರ ಸಾಲನ್ನ ಮಾಡ್ತಿಲ್ಲ‌ ಎಂದು. ಮೋದಿ ಉತ್ತರ ಕೊಡಲಿಲ್ಲ. ಇದೇ ಪ್ರಶ್ನೆಯನ್ನು ಸಿದ್ದರಾಮಯ್ಯಗೆ ಕೇಳಿದೆ. 10 ದಿನದೊಳಗೆ ರೈತರ ಸಾಲ ಮನ್ನ ಮಾಡಿದರು. ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ ಎಂದಿದ್ದಾರೆ. 

ಮತ್ತೆ ಜೆಡಿಎಸ್ ಟೀಕೆ ಮಾಡಿದ್ದಾರೆ ರಾಹುಲ್ ಗಾಂಧಿ. ಜೆಡಿಎಸ್ ಎಂದರೆ ಜನತಾದಳ ಸಂಘಪರಿವಾರ. ಬಿಜೆಪಿ ಬಿ ಟೀಮ್ ಜೆಡಿಎಸ್. ಬಿಜೆಪಿಗೆ ಸಹಾಯ ಮಾಡ್ತಿದ್ದಾರ ಇಲ್ವ ಎಂದು ಜೆಡಿಎಸ್ ನಾಯಕರು ಸ್ಷಷ್ಟತೆ ಕೊಡಬೇಕು ಎಂದಿದ್ದಾರೆ.