ಶ್ರೀಗಳನ್ನು ಭೇಟಿಯಾದ ರಾಹುಲ್ ಮತ್ತು ಸಿಎಂ..!

First Published 21, Mar 2018, 1:46 PM IST
Rahul Gandhi and CM Siddaramaiah takes blessings for Sringeri Shri
Highlights

ಶ್ರೀ ಮಠದ ಭಾರತೀ ತೀರ್ಥ ಶ್ರೀಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿಯಾಗಿ, ಆಶೀರ್ವಾದ ಪಡೆದರು.

ಶೃಂಗೇರಿ: ಶ್ರೀ ಮಠದ ಭಾರತೀ ತೀರ್ಥ ಶ್ರೀಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿಯಾಗಿ, ಆಶೀರ್ವಾದ ಪಡೆದರು.

ಮೊದಲು ಶ್ರೀಗಳನ್ನು ಭೇಟಿಯಾಗಿ ರಾಹುಲ್ ಗಾಂಧಿ ಆಶೀರ್ವಾದ ಪಡೆದರು. ಅವರೊಂದಿಗೆ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಇದ್ದರು.

ಶೃಂಗೇರಿ ಮಠದ ನರಸಿಂಹ ವನದಲ್ಲಿ ಶ್ರೀಗಳನ್ನು ಕಾಂಗ್ರೆಸ್ ಮುಖಂಡರು ಭೇಟಿಯಾಗಿ, ಆಶೀರ್ವಾದ ಪಡೆದರು. ಕೆಲ ಹೊತ್ತಿನ ಬಳಿಕ ಶ್ರೀಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದರು.

ಮೊದಲು ರಾಹುಲ್‌ ಅವರೊಂದಿಗೆ ಶ್ರೀಗಳನ್ನು ಭೇಟಿಯಾಗಲು ಸಿಎಂ ತೆರಳದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ಶಾರದಾಂಬೆ ದೇವಾಲಯದಲ್ಲಿ ದರ್ಶನದ ಬಳಿಕ ಪಾಕಶಾಲೆಗೆ ಸಿಎಂ ಹೋಗಿದ್ದರಿಂದ, ಶ್ರೀಗಳ ಭೇಟಿಯಲ್ಲಿ ವಿಳಂಬವಾಗಿತ್ತು. 
 

loader