ರಾಹುಲ್ ಗಾಂಧಿ ’ದ್ವೇಷದ ವ್ಯಾಪಾರಿ’ : ಕೇಂದ್ರ ಸಚಿವ

First Published 24, Jul 2018, 12:40 PM IST
Rahul Gandhi a 'Merchant of Hate', Says Piyush Goyal After Congress Attacks BJP on Alwar Lynching
Highlights

- ಅಪರಾಧವನ್ನು ಸಂಭ್ರಮಿಸದಿರಿ ರಾಹುಲ್ ಗಾಂಧಿಗೆ ಸಚಿವ ಪೀಯೂಷ್ ತಿರುಗೇಟು

- ನೀವು ಮತಗಳಿಕೆಗಾಗಿ ಸಮಾಜ ವಿಭಜಿಸುತ್ತಿದ್ದೀರಿ. ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ. ಸಾಕಿನ್ನು. ನೀವೊಬ್ಬ ದ್ವೇಷದ ವ್ಯಾಪಾರಿ’ ಎಂದು ಗೋಯಲ್ ಕಿಡಿ

ನವದೆಹಲಿ (ಜು. 24): ಅಲ್ವರ್ ಘಟನೆ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸರಣಿ ದಾಳಿ ನಡೆಸಿದೆ. ಅದರಲ್ಲೂ ಕೇಂದ್ರ ಸಚಿವ ಪೀಯೂಶ್ ಗೋಯಲ್ ರಾಹುಲ್ ಗಾಂಧಿ ಅವರನ್ನು
‘ದ್ವೇಷದ ವ್ಯಾಪಾರಿ’ ಎಂದು ಪ್ರತ್ಯಾರೋಪ ಮಾಡಿದ್ದಾರೆ.

‘ಪ್ರತಿ ಸಲ ಅಪರಾಧ ಘಟನೆಗಳು ಸಂಭವಿಸಿದಾಗಲೂ ಸಂಭ್ರಮದಿಂದ ಕುಣಿಯುವುದನ್ನು ಬಿಡಿ ರಾಹುಲ್ ಗಾಂಧಿ. ರಾಜ್ಯ ಸರ್ಕಾರಗಳು ಈ ಕುರಿತು ಕಠಿಣ ಕ್ರಮ ಜರುಗಿಸಿವೆ. ನೀವು ಮತಗಳಿಕೆಗಾಗಿ ಸಮಾಜ ವಿಭಜಿಸುತ್ತಿದ್ದೀರಿ. ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ. ಸಾಕಿನ್ನು. ನೀವೊಬ್ಬ ದ್ವೇಷದ ವ್ಯಾಪಾರಿ’ ಎಂದು ಗೋಯಲ್ ಕಿಡಿಕಾರಿದ್ದಾರೆ.

ಸಚಿವೆ ಸ್ಮತಿ ಇರಾನಿ ಕೂಡಾ ರಾಹುಲ್'ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

loader