Asianet Suvarna News Asianet Suvarna News

'ಮೋದಿಜಿ, ಡೋಕ್ಲಾಮ್'ನಲ್ಲಿ ಭಾರತ-ಚೀನಾದ ನಡುವೆ ನಡೆದಿದ್ದೇನು ಎನ್ನುವುದನ್ನು ದೇಶಕ್ಕೆ ತಿಳಿಸಿ'

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಎಂದಿನಂತೆ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಡೋಕ್ಲಾಮ್’ನಲ್ಲಿ ಚೀನಾ-ಭಾರತ ಸೇನೆ ನಡುವೆ ಏನು ನಡೆಯಿತು ಎಂಬುದನ್ನು ದೇಶಕ್ಕೆ ತಿಳಿಸಿಕೊಡಿ ಎಂದು ರಾಹುಲ್ ಗಾಂಧಿ ಮೋದಿಗೆ ಒತ್ತಾಯಿಸಿದ್ದಾರೆ.

Rahul demands explanation from PM on road construction by China

ನವದೆಹಲಿ (ಅ.07): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಎಂದಿನಂತೆ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಡೋಕ್ಲಾಮ್’ನಲ್ಲಿ ಚೀನಾ-ಭಾರತ ಸೇನೆ ನಡುವೆ ಏನು ನಡೆಯಿತು ಎಂಬುದನ್ನು ದೇಶಕ್ಕೆ ತಿಳಿಸಿಕೊಡಿ ಎಂದು ರಾಹುಲ್ ಗಾಂಧಿ ಮೋದಿಗೆ ಒತ್ತಾಯಿಸಿದ್ದಾರೆ.

ಚೀನಾ-ಭಾರತ ನಡುವೆ ಏನು ಒಪ್ಪಂದವಾಯಿತು? ಚೀನಾ ನಿರ್ಮಿಸುತ್ತಿರುವ ರಸ್ತೆಯ ಬಗ್ಗೆ ಸಮಜಾಯಿಷಿ ಕೊಡಿ ಎಂದು ಮೋದಿಗೆ ಆಗ್ರಹಿಸಿದ್ದಾರೆ.

ಗಡಿ ವಿಚಾರದಲ್ಲಿ ಖ್ಯಾತೆ ತೆಗೆದು ಡೋಕ್ಲಾಮ್’ನಲ್ಲಿ ಸೇನೆಯನ್ನು ನಿಯೋಜಿಸಿದ್ದ ಚೀನಾದ ಜೊತೆ ಏನು ಒಪ್ಪಂದ ಮಾಡಿಕೊಂಡು ಸೇನೆಯನ್ನು ಕಳುಹಿಸಿದಿರಿ? ಯಾವ ನೀತಿಯನ್ನು ಕೈಗೊಂಡಿದ್ದೀರಿ? ಚೀನಾ ಅಧ್ಯಕ್ಷ ಶಿ ಜಿಂಪಿಂಗ್’ರನ್ನು ಮತ್ತೆ ಸಾಬರಮತಿ ಆಶ್ರಮಕ್ಕೆ ಆಹ್ವಾನಿಸುತ್ತೀರಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಲ್ ಮೋದಿಯನ್ನು ಪ್ರಶ್ನಿಸಿದ್ದಾರೆ.

 

Follow Us:
Download App:
  • android
  • ios