ಕೃಷಿ ಸಂಸ್ಕೃತಿಯೂ ಸಮೃದ್ಧವಾಗಿದೆ. ಹೀಗಾಗಿ ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆ ದೃಷ್ಟಿಯಿಂದಲೂ ಕಂಬಳ ಆಚರಣೆ ನಡೆಯಬೇಕು ಎಂದು ರಾಘವೇಶ್ವರ ಶ್ರೀ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು (ಜ.24): ಕರಾವಳಿಯ ಜಾನಪದ ಕ್ರೀಡೆ ಕಂಬಳ ಉಳಿಸಿ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಯವರು ಕಂಬಳ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.
ಗೋಮಂಗಲ ಯಾತ್ರೆಯ ಸಮಾರೋಪ ಪ್ರಯುಕ್ತ ಮಂಗಳೂರಿನಲ್ಲಿ ಮಾತನಾಡಿದ ಅವರು, ಕಂಬಳದಿಂದಾಗಿ ಗೋ ತಳಿ ಉಳಿಯುವಂತಾಗಿದೆ.
ಕೃಷಿ ಸಂಸ್ಕೃತಿಯೂ ಸಮೃದ್ಧವಾಗಿದೆ. ಹೀಗಾಗಿ ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆ ದೃಷ್ಟಿಯಿಂದಲೂ ಕಂಬಳ ಆಚರಣೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಸುವರ್ಣ ನ್ಯೂಸ್ ಅಭಿಯಾನಕ್ಕೆ ಭಾರೀ ಬೆಂಬಲ
ಸುವರ್ಣನ್ಯೂಸ್ ‘ಕಂಬಳ ಕಾಪಾಡಿ’ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಾನಪದ ಕ್ರೀಡೆ ಕಂಬಳ ಉಳಿವಿಗಾಗಿ ಮಂಗಳೂರಿನಲ್ಲಿ ವಿವಿಧ ಸಂಘಟನೆಗಳು ಇಂದು ಹೋರಾಟ ನಡೆಸಿದವು. ತುಳುನಾಡ ರಕ್ಷಣಾ ವೇದಿಕೆ ಕಂಬಳ ಉಳಿಸಿ ಅಭಿಯಾನ ನಡೆಸಿ ಕಂಬಳ ಕ್ರೀಡೆ ನಿಷೇಧ ತೆರವಿಗೆ ಆಗ್ರಹಿಸಿತು. ನಗರದ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಯುತ್ತಿದ್ದು ವಿದ್ಯಾರ್ಥಿಗಳು, ಕಾರ್ಮಿಕರೂ ಹೋರಾಟದಲ್ಲಿ ಪಾಲ್ಗೊಂಡಿದ್ದರು.
