Asianet Suvarna News Asianet Suvarna News

ರಾಘವೇಶ್ವರ ಶ್ರೀಗಳಿಂದ ಚಾಮರಾಜನಗರ ಜಿಲ್ಲೆಯ ರಾಮಾಪುರದಲ್ಲಿ ಧ್ಯಾನ್ಯಂಕುರ ಘಟಕ ಸ್ಥಾಪನೆ

ಮೇವಿಲ್ಲದೆ ಕಂಗಾಲಾಗಿರುವ ಗೋವುಗಳ ಸಂರಕ್ಷಣೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಮುಂದಾಗಿದ್ದಾರೆ. ಇದಕ್ಕಾಗಿ ಚಾಮರಾಜನಗರ ಜಿಲ್ಲೆಯ ರಾಮಾಪುರದಲ್ಲಿ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಧ್ಯಾನ್ಯಂಕುರ ಘಟಕ ಸ್ಥಾಪನೆ ಮಾಡಲಾಗಿದೆ.

Raghaveshvara Shri Establish dhanyankura in Chamarajanagara

ಚಾಮರಾಜನಗರ (ಜೂ.10): ಮೇವಿಲ್ಲದೆ ಕಂಗಾಲಾಗಿರುವ ಗೋವುಗಳ ಸಂರಕ್ಷಣೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಮುಂದಾಗಿದ್ದಾರೆ. ಇದಕ್ಕಾಗಿ ಚಾಮರಾಜನಗರ ಜಿಲ್ಲೆಯ ರಾಮಾಪುರದಲ್ಲಿ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಧ್ಯಾನ್ಯಂಕುರ ಘಟಕ ಸ್ಥಾಪನೆ ಮಾಡಲಾಗಿದೆ.

ಇಲ್ಲಿ ವಿವಿಧ ರೀತಿಯ ದೇಶೀಯ ತಳಿಯ ಗೋವುಗಳನ್ನು ಸಂರಕ್ಷಿಸಿ, ರೈತರಿಗೆ ಹೆಚ್ಚಿನ ಲಾಭ ದೊರೆಯುವಂತೆ ಎರಡು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಮೇವಿಲ್ಲದೆ ಕಂಗಾಲಾಗಿರುವ ಗೋವುಗಳಿಗೆ ಧಾನ್ಯಾಂಕುರ ಘಟಕ ಸ್ಥಾಪಿಸಿ ಪ್ರತಿದಿನ ಪೌಷ್ಠಿಕ ಆಹಾರ ಒದಗಿಸುವುದು. ಹಾಗೂ ಗೋವಿನ ಹಾಲು, ಗೋಮೂತ್ರ ಹಾಗೂ ಸಗಣಿಯಿಂದ ವಿವಿಧ ರೀತಿಯ ಉತ್ಪನ್ನ ತಯಾರಿಸಿ ರೈತರಿಗೆ ಹೆಚ್ಚಿನ ಲಾಭ ತಂದು ಕೊಡುವ ಯೋಜನೆ ಅನುಷ್ಠಾನಗೊಳಿಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚಾಮರಾಜನಗರ ಜಿಲ್ಲೆಯ ರಾಮಾಪುರದಲ್ಲಿ ಧ್ಯಾನ್ಯಂಕುರ ಘಟಕ ಸ್ಥಾಪಿಸಲಾಗಿದೆ. ಇನ್ನು ಕೆಂಪಯ್ಯನಹಟ್ಟಿಯಲ್ಲಿ  ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಗವ್ಯ ಉದ್ಯಮ ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ ಸ್ಥಳೀಯರು 25 ಎಕರೆ ಜಮೀನನ್ನು ಸಹ ಶ್ರೀರಾಮಚಂದ್ರಾಪುರ ಮಠಕ್ಕೆ ನೀಡಿದ್ದಾರೆ.

 

Follow Us:
Download App:
  • android
  • ios