ದೆಹಲಿ(ನ.11): 500, 1000 ರೂ. ನೋಟು ಚಲಾವಣೆ ರದ್ದು ಹಿನ್ನೆಲ್ಲೇಯಲ್ಲಿ ಉಂಟಾಗಿರುವ ತಲೆ ಬಿಸಿ  ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೂ ತಟ್ಟಿದೆ. 

ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿರುವ ಎಸ್ ಬಿ ಐ ಬ್ಯಾಂಕಿಗೆ ನಾಲ್ಕು ಸಾವಿರ ಹಣ ಪಡೆಯಲು ರಾಹುಲ್ ಕೂಡ ಸಾಮನ್ಯ ಪ್ರಜೆಗಳೊಂದಿಗೆ ಸರತಿ ಸಾಲಿನಲ್ಲಿ ನಿಂತ ಘಟನೆ ನಡೆದಿದೆ.

ಅಲ್ಲದೆ ಸರತಿಯಲ್ಲಿ ನಿಂತು ಸಮಯ ಕಳೆದರು ಹಣ ಪಡೆಯಲು ಹರಸಾಹಸ ಪಡಬೇಕಾಯಿತು. ನನಗೆ ಇಂತಹ ಪರಿಸ್ಥಿತಿ ಎದುರಾದರೆ ಸಾಮನ್ಯ ಗ್ರಾಹಕರ ಅವಲುಗಳನ್ನು ಯಾರು ಕೇಳುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. 

ಕೇಂದ್ರದ ದಿಡೀರ್ ನಿರ್ಧಾರವನ್ನು ಪ್ರಶ್ನಿಸಿರುವ ರಾಹುಲ್ ಕೇಂದ್ರ ಸರ್ಕಾರದ ಮೇಲೆ ವಾಕ್ಸಮರವನ್ನೆ ನಡೆಸಿದ್ದಾರೆ. ಅಲ್ಲದೆ ಸರತಿಯಲ್ಲಿ ನಿಂತ ಗ್ರಾಹಕರೊಂದಿಗೆ  ಸೆಲ್ಫಿಗೆ ಮೊರೆ ಹೋದ ಘಟನೆಯೂ ನಡೆದಿದೆ.