ಪಟನಾ[ಸೆ.30]: ಲಾಲು ಪ್ರಸಾದ್‌ ಯಾದವ್‌ ಕುಟುಂಬಸ್ಥರು ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಲಾಲು ಪುತ್ರ ತೇಜ್‌ ಪ್ರತಾಪ್‌ರ ಮಾಜಿ ಪತ್ನಿ ಐಶ್ವರ್ಯಾ ಆರೋಪ ಮಾಡಿದ್ದಾರೆ.

ಲಾಲು ಪತ್ನಿ ರಾಬ್ಡಿದೇವಿ ಮತ್ತು ಪುತ್ರಿ ಮಿಸಾ ಭಾರತೀ ನನಗೆ ಆಹಾರ ನೀಡದೇ ಮನೆಯಲ್ಲಿ ಕೂಡಿಹಾಕಿದ್ದರು. ಲಾಲು ಕುಟುಂಬದೊಂದಿಗೆ ಇರಲು ಬಯಸಿದರೂ ಅವರು ನನಗೆ ಕಿರುಕುಳ ನೀಡುತ್ತಿದ್ದರು. ಹಲವು ಬಾರಿ ನನ್ನ ತಂದೆ ಮನೆಯ ಆಹಾರ ತಂದು ಸೇವಿಸಿದ್ದೇನೆ ಎಂದು ಐಶ್ವರ್ಯಾ ದೂರಿದ್ದಾರೆ.

ಕಳೆದ ವರ್ಷ ಐಶ್ವರ್ಯಾ ತೇಜ್‌ ವಿಚ್ಚೇಧನ ನೋಟಿಸ್‌ ನೀಡಿದ್ದರು.