ಈಗಾಗಲೇ ಬಾಕ್ಸ್'ಆಫೀಸ್'ನಲ್ಲಿ 46 ಕೋಟಿ ಕೊಳ್ಳೆ ಹೊಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ 50 ಕೋಟಿ ದುಡ್ಡು ಮಾಡುವ ಎಲ್ಲ ಲಕ್ಷಣ ಕಾಣುತ್ತಿದೆ.ಸಿನಿಮಾ ಇನ್ನು ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ಇದಕ್ಕೆ ಸಾಕ್ಷಿ. 46 ಕೋಟಿ ಗಳಿಕೆಯಲ್ಲಿ ನಿರ್ಮಾಪಕರು 31 ಕೋಟಿ ಜೇಬಿಗಿಳಿಸಿಕೊಂಡಿದ್ದಾರೆ.

ಬೆಂಗಳೂರು(ಮೇ.09): ಪುನೀತ್ ರಾಜ್'ಕುಮಾರ್ ಅಭಿನಯದ 'ರಾಜಕುಮಾರ' ಕನ್ನಡ ಚಿತ್ರರಂಗ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ. ಅತೀ ಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಇದಾಗಿದೆ.

ಈಗಾಗಲೇ ಬಾಕ್ಸ್'ಆಫೀಸ್'ನಲ್ಲಿ 46 ಕೋಟಿ ಕೊಳ್ಳೆ ಹೊಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ 50 ಕೋಟಿ ದುಡ್ಡು ಮಾಡುವ ಎಲ್ಲ ಲಕ್ಷಣ ಕಾಣುತ್ತಿದೆ.ಸಿನಿಮಾ ಇನ್ನು ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ಇದಕ್ಕೆ ಸಾಕ್ಷಿ. 46 ಕೋಟಿ ಗಳಿಕೆಯಲ್ಲಿ ನಿರ್ಮಾಪಕರು 31 ಕೋಟಿ ಜೇಬಿಗಿಳಿಸಿಕೊಂಡಿದ್ದಾರೆ. ಇಷ್ಟು ಹಣದೊಂದಿಗೆ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಮಿ ಅಂಡ್ ಮಿಸಸ್ ರಾಮಚಾರಿ ಹಾಗೂ 2006ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ ದಾಖಲೆಯನ್ನು 'ರಾಜಕುಮಾರ' ಮುರಿದಿದೆ.

ರಾಜಕುಮಾರ ಇಷ್ಟು ಗಳಿಕೆ ಕಂಡಿರುವುದಕ್ಕೆ ರಾಜ್ಯದ ಮಲ್ಟಿ'ಫ್ಲೆಕ್ಸ್'ಗಳಲ್ಲಿ ಟಿಕೆಟ್ ದರ ಹೆಚ್ಚಿರುವುದು ಒಂದು ಪ್ರಮುಖ ಕಾರಣ ಎನ್ನಬಹುದು. ರಾಜ್ಯ ಸರ್ಕಾರ ಇತ್ತೀಚಿಗಷ್ಟೆ ರಾಜ್ಯದಾದ್ಯಂತ ಕನ್ನಡ ಒಳಗೊಂಡು ಎಲ್ಲ ಸಿನಿಮಾಗಳ ಟಿಕೆಟ್ ದರಗಳನ್ನು ಗರಿಷ್ಠ 200 ರೂ. ನಿಗದಿಪಡಿಸಿದೆ. ಈ ಮೊದಲು ವಿಷ್ಣುವರ್ಧನ್ ಅಭಿನಯದ 'ಯಜಮಾನ'(2000),ಶಿವಣ್ಣನ 'ಓಂ'(1995) ಹಾಗೂ ಜೋಗಿ(2005) ಅತ್ಯಂತ ಹೆಚ್ಚು ಗಳಿಕೆ ಕಂಡ ಚಿತ್ರಗಳಾಗಿದ್ದವು. ಕನ್ನಡ ಸಿನಿಮಾಗಳಲ್ಲಿ ಜೋಗಿ ಸಿನಿಮಾ ಬಿಟ್ಟರೆ ರಾಜಕುಮಾರ ಮಾತ್ರವೇ ಹೆಚ್ಚು ಜನರನ್ನು ತಲುಪಿದ ಸಿನಿಮಾವಾಗಿದೆ.