ಪ್ರಾಕೃತಿಕ ವಿಕೋಪದ ಜೀವಹಾನಿ ಪ್ರಕರಣಗಳಲ್ಲಿ ಪರಿಹಾರ ಮೊತ್ತವನ್ನು .4 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಮಂಗಳೂರು : ಪ್ರಾಕೃತಿಕ ವಿಕೋಪದ ಜೀವಹಾನಿ ಪ್ರಕರಣಗಳಲ್ಲಿ ಪರಿಹಾರ ಮೊತ್ತವನ್ನು .4 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ಮಂಗಳೂರಿನಲ್ಲಿ ಗುರುವಾರ ಪ್ರಾಕೃತಿಕ ಹಾನಿಗೀಡಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪದಿಂದ ಜೀವಹಾನಿ ಸಂಭವಿಸಿದರೆ, ಮೃತರ ಕುಟುಂಬಕ್ಕೆ .4 ಲಕ್ಷ ಪರಿಹಾರ ನೀಡಲಾಗುತ್ತಿದೆ. ಈ ಮೊತ್ತಕ್ಕೆ ಸಿಎಂ ಪರಿಹಾರ ನಿಧಿಯ .1 ಲಕ್ಷ ಸೇರಿಸಿ ಒಟ್ಟು .5 ಲಕ್ಷ ಪರಿಹಾರ ನೀಡಲಾಗುವುದು. ಈಗಾಗಲೇ ಪರಿಹಾರ ನೀಡಿದವರಿಗೆ ಹೆಚ್ಚುವರಿ ಮೊತ್ತವನ್ನು ತಲುಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.
.22 ಕೋಟಿ ಬಿಡುಗಡೆ: ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೇರೆ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೃಹತ್ ಪ್ರಮಾಣದಲ್ಲಿ ಮಳೆ ಹಾನಿ ಸಂಭವಿಸಿದೆ. ಮಳೆ ಹಾನಿ ಕುರಿತ ವರದಿಗಳು ದಿನನಿತ್ಯ ಸರ್ಕಾರದ ಕೈಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಲು ರಾಜ್ಯ ಸರ್ಕಾರ .22 ಕೋಟಿ ಬಿಡುಗಡೆಗೊಳಿಸಿದೆ. ಪ್ರಾಕೃತಿಕ ಪರಿಹಾರ ಕಾರ್ಯಕ್ಕೆ ಯಾವುದೇ ತೊಂದರೆಯಾಗಬಾರದು ಎಂದು ಎಲ್ಲ ಜಿಲ್ಲೆಗಳಿಗೆ ಹೆಚ್ಚುವರಿ ಮೊತ್ತವನ್ನು ನೀಡಲಾಗಿದೆ ಎಂದರು.
ಬಾಡಿಗೆದಾರರಿಗೂ ಮನೆ ಹಾನಿ ಪರಿಹಾರಕ್ಕೆ ಚಿಂತನೆ
ಮಳೆಯಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಪರಿಹಾರ ಕಡಿಮೆಯಿದ್ದು, ಈ ಮೊತ್ತವನ್ನು ಹೆಚ್ಚಿಸಲು ಪರಿಶೀಲನೆ ನಡೆಸುವುದಾಗಿ ಕಂದಾಯ ಸಚಿವ ದೇಶಪಾಂಡೆ ಭರವಸೆ ನೀಡಿದರು.
ಪ್ರಸ್ತುತ ಸಂಪೂರ್ಣ ಮನೆ ಕುಸಿತಕ್ಕೆ ಒಳಗಾದವರಿಗೆ ತಲಾ .1 ಲಕ್ಷದಷ್ಟುಪರಿಹಾರ ಒದಗಿಸಲಾಗುತ್ತಿದೆ. ಆದರೆ, ಇದು ಸಾಲದು. ಇನ್ನೂ ಬೇರೆ ಯಾವ ರೀತಿಯಿಂದ ಪರಿಹಾರ ಕೊಡಿಸಲು ಸಾಧ್ಯ ಎಂಬ ಬಗ್ಗೆ ಗಮನ ಹರಿಸಲಾಗುವುದು. ಮನೆ ಮಾಲೀಕರಿಗೆ ಮಾತ್ರವಲ್ಲ, ಬಾಡಿಗೆದಾರರಿಗೂ ಹಾನಿಯಿಂದ ಸಮಸ್ಯೆಗಳಾಗಿದೆ. ಅಂಥವರಿಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಳೆದ ಎರಡು ದಿನಗಳಿಂದ ವಿಪರೀತ ಮಳೆಯಿಂದ ಭೂಕುಸಿತ ಉಂಟಾಗಿ ಬಂದ್ ಆಗಿರುವ ಚಾರ್ಮಾಡಿ ಘಾಟ್ ಶುಕ್ರವಾರ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಇದೆ. ಭಾರಿ ಮಳೆಯ ಕಾರಣ ಮತ್ತೆ ಭೂಕುಸಿತ ಉಂಟಾಗುತ್ತಿದೆ. ಇದರಿಂದಾಗಿ ಪರಿಹಾರ ಕಾರ್ಯ ವಿಳಂಬವಾಗುತ್ತಿದೆ. ಆದರೂ ಅಧಿಕಾರಿಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಆರ್.ವಿ. ದೇಶಪಾಂಡೆ, ಕಂದಾಯ ಸಚಿವರು
