ಪರಮೇಶ್ವರ್ ಅವರನ್ನ ಅಧ್ಯಕ್ಷರಾಗಿ ಮುಂದುವರಿಸುವ ಮೂಲಕ ಬಿಜೆಪಿ ನೂರೈವತ್ತು ಸ್ಥಾನ ಗೆಲ್ಲೋದನ್ನ ತಡೆಯೋಕೆ ಸಾಧ್ಯವಿಲ್ಲ.
ಬೆಂಗಳೂರು(ಮೇ.30): ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರು ಪರಮೇಶ್ವರ್ ಗೆ ಆರ್ ಆಶೋಕ್ ಟಾಂಗ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರನ್ನ ಸೋಲಿಸಿದ್ದೇ ಸಿಎಂ ಸಿದ್ದರಾಮಯ್ಯ. ಈಗ ಅದೇ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ತನ್ನ ಪಕ್ಷದ ಅಧ್ಯಕ್ಷರನ್ನೇ ಗೆಲ್ಲಿಸಿಕೊಳ್ಳಲಾಗದವರಿಗೆ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಮೋದಿ ಫೆಸ್ಟ್ ಪ್ರಚಾರ ವಾಹನ ಉದ್ಘಾಟಿಸಿ ಮಾತನಾಡಿ, ಪರಮೇಶ್ವರ್ ಅವರನ್ನ ಅಧ್ಯಕ್ಷರಾಗಿ ಮುಂದುವರಿಸುವ ಮೂಲಕ ಬಿಜೆಪಿ ನೂರೈವತ್ತು ಸ್ಥಾನ ಗೆಲ್ಲೋದನ್ನ ತಡೆಯೋಕೆ ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಶತಸಿದ್ಧ ಅಂತ ಹೇಳಿದ್ರು.
