ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಷ್ಟೂ ಬಿಜೆಪಿಗೆ ಅನುಕೂಲ

First Published 27, Feb 2018, 1:49 PM IST
R Ashok Slams Congress Leader
Highlights

ರಾಹುಲ್ ಗಾಂಧಿ ಹೆಸರಲ್ಲೇ ರಾಹು ಇದೆ. ಅವರು ಎಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ಕಾಂಗ್ರೆಸ್ ಸರ್ವನಾಶ ಆಗುತ್ತಿದೆ. ರಾಜ್ಯಕ್ಕೆ ರಾಹುಲ್ ಹೆಚ್ಚು ಬಂದಂತೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಬಿಜೆಪಿ ಮುಖಂಡ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರು : ರಾಹುಲ್ ಗಾಂಧಿ ಹೆಸರಲ್ಲೇ ರಾಹು ಇದೆ. ಅವರು ಎಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ಕಾಂಗ್ರೆಸ್ ಸರ್ವನಾಶ ಆಗುತ್ತಿದೆ. ರಾಜ್ಯಕ್ಕೆ ರಾಹುಲ್ ಹೆಚ್ಚು ಬಂದಂತೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಬಿಜೆಪಿ ಮುಖಂಡ ಆರ್ ಅಶೋಕ್ ಹೇಳಿದ್ದಾರೆ.

ರಾಹುಲ್ ಗಾಂಧಿ ಭೇಟಿ ನೀಡಿದ ಪ್ರದೇಶದಲ್ಲೆಲ್ಲಾ ರಾಹು ಮನೆ ಮಾಡುತ್ತಾನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಮಾರ್ಚ್ 02ರಿಂದ  ಬಿಜೆಪಿ ಪ್ರಮುಖ 5 ವಿಷಯಗಳನ್ನು ಇಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದೆ. ಅದರಲ್ಲಿ ನಲಪಾಡ್ ವಿಚಾರವೂ ಕೂಡ ಒಂದಾಗಿದೆ.

ಚುನಾವಣೆಗಾಗಿ ನಾವು ಪಾದಯಾತ್ರೆ ನಡೆಸುತ್ತಿಲ್ಲ. ಆದರೆ ಈ ಪಾದಯಾತ್ರೆ ಬಿಜೆಪಿಗೆ ಅನುಕೂಲ ಆಗಬಹುದು.

ಕಾಂಗ್ರೆಸ್ ಗೂಂಡಾಗಿರಿಯಿಂದ ಬೆಂಗಳೂರು ರಕ್ಷಿಸಲು ಪಾದಯಾತ್ರೆ ನಡೆಸುತ್ತಿದೆ.  ನಲಪಾಡ್ ಪ್ರಕರಣ ಒಂದೇ ಅಲ್ಲ.  ಹಿಂದೆ ರುದ್ರೇಶ್ ಸಂತೋಷ್ ಕೊಲೆ ಆದಾಗ ಬಿಜೆಪಿ ಬೆಂಗಳೂರಿನಲ್ಲಿ ಹೋರಾಟ ಮಾಡಿತ್ತು ಎಂದು ಬಿಜೆಪಿ ಮುಖಂಡ ಆರ್ ಅಶೋಕ್ ಹೇಳಿದ್ದಾರೆ.

loader