ಕಮಲ ಪಾಳೇಯಕ್ಕೆ ಶಾಕ್ ಕೊಟ್ಟ ಹಿರಿಯ ನೇತಾರ! ಏಕಾಏಕಿ ಬಿಜೆಪಿ ಪಕ್ಷ ತೊರೆಯಲಿರುವ ಹಿರಿಯ ನಾಯಕ! ಬಿಜೆಪಿ ತೊರೆದ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್! ಬಿಜೆಪಿ ಸೇರಿದ್ದು ತಮ್ಮ ಜೀವನದ ದೊಡ್ಡ ತಪ್ಪು ಎಂದ ಮನ್ವೇಂದ್ರ!ಕೇಂದ್ರ ಮತ್ತು ರಾಜಸ್ಥಾನ ಸರ್ಕಾರದ ವಿರುದ್ದ ಹರಿಹಾಯ್ದ ಮನ್ವೇಂದ್ರ! ವಿಧಾನಸಭೆ ಹೊಸ್ತಿಲಲ್ಲೇ ಪಕ್ಷಕ್ಕೆ ಶಾಕ್ ನೀಡಿದ ಮನ್ವೇಂದ್ರ ಸಿಂಗ್    

ಬಾರ್ಮರ್(ಸೆ.22): ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ, ಮನ್ವೇಂದ್ರ ಸಿಂಗ್ ಪಕ್ಷ ತೊರೆಯುವ ಘೋಷಣೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಬಾರ್ಮರ್ ನಲ್ಲಿ ಆಯೋಜಿಸಲಾಗಿದ್ದ ಸ್ವಾಭೀಮಾನ್ ರ‍್ಯಾಲಿ ಸಮಾವೇಶದಲ್ಲಿ ಮಾತನಾಡಿದ ಮನ್ವೇಂದ್ರ ಸಿಂಗ್, ಬಿಜೆಪಿ ಸೇರಿದ್ದು ತಮ್ಮ ಜೀವಮಾನದ ದೊಡ್ಡ ತಪ್ಪು ಎಂದು ಹೇಳಿದ್ದಾರೆ.

ರಾಜಸ್ಥಾನ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮನ್ವೇಂದ್ರ ಸಿಂಗ್, ಎರಡೂ ಸರ್ಕಾರಗಳು ಜನರಿಗೆ ದ್ರೋಹ ಬಗೆದಿದ್ದು, ಇಂತಹ ಪಕ್ಷದಲ್ಲಿ ಇರುವುದು ಆತ್ಮ ಸ್ವಾಭಿಮಾನವನ್ನು ಮಾರಿಕೊಂಡಂತೆ ಎಂದು ಮನ್ವೇಂದ್ರ ಹೇಳಿದ್ದಾರೆ.

ಇನ್ನು ರಾಜಸ್ಥಾನ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಮನ್ವೇಂದ್ರ ಸಿಂಗ್ ಬಿಜೆಪಿ ತೊರೆಯಲಿರುವುದು ಪಕ್ಷಕ್ಕೆ ಭಾರೀ ನಷ್ಟವನ್ನುಟಂಟು ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.