ನಮಗೆಲ್ಲಾ ಗೊತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ಕಳೆದ ಏಪ್ರಿಲ್ ನಲ್ಲಿ ಇಂಗ್ಲೆಂಡ್ ಗೆ ಭೇಟಿ ನೀಡಿದ್ದರು. ಈ ವೇಳೆ ಇಂಗ್ಲೆಂಡ್ ರಾಣಿಯನ್ನಭೇಟಿ ಮಾಡಿದ್ದರು. ಕ್ವೀನ್ ಎಲಿಜಬೆತ್ ಪ್ರಧಾನಿ ಮೋದಿಗೆ ಅಪರೂಪದ ಗಿಫ್ಟ್ ವೊಂದನ್ನು ಇದೇ ಸಂದರ್ಭದಲ್ಲಿ ನೀಡಿದ್ದರು. ಐತಿಹಾಸಿಕ ಮಹತ್ವವಿರುವ ಆ ಗಿಫ್ಟ್ ಏನು? ಉತ್ತರ ಇಲ್ಲಿದೆ..
ನವದೆಹಲಿ[ಜು.10] ಪ್ರಧಾನಿ ಮೋದಿಗೆ ರಾಣಿ ಎಲಿಜಬೆತ್ ನೀಡಿರುವ ಗಿಫ್ಟ್ ಸಾಮಾನ್ಯವಾದದ್ದಲ್ಲ. ಅವರ ಮದುವೆಗೆ 1947ರಲ್ಲಿ ಮಹಾತ್ಮ ಗಾಂಧೀಜಿ ನೀಡಿದ್ದ ಹತ್ತಿಯ ಕಸೂತಿಯೊಂದನ್ನು ಮೋದಿಗೆ ನೀಡಿದ್ದಾರೆ. ಅಂದರೆ ಭಾರತದ ವಸ್ತುವೊಂದು ಭಾರತಕ್ಕೆ ಮರಳಿದಂತಾಗಿದೆ.
12*24 ಅಳತೆಯ ಕಸೂತಿಯನ್ನು ಲಾರ್ಡ್ ಮೌಂಟ್ ಬ್ಯಾಟನ್ ಮೂಲಕ ಗಾಂಧೀಜಿ ಇಂಗ್ಲೆಂಡ್ ಗೆ ಕಳಿಸಿಕೊಟ್ಟಿದ್ದರು. ಕಸೂತಿಯ ಮೇಲೆ ಜೖ ಹಿಂದ್ ಎಂದು ಬರೆದಿದ್ದನ್ನು ನಾವು ಗಮನಿಸಬಹುದಾಗಿದೆ. ಮೋದಿ ಸೆರಕಾರದ ನಾಲ್ಕು ವರ್ಷದ ಸಾಧನೆ ಬಗ್ಗೆ ಮಾತನಾಡುತ್ತ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಈ ಗಿಫ್ಟ್ ಸ್ವೀಕಾರದ ಕತೆಯನ್ನು ಬಿಚ್ಚಿಟ್ಟರು.

ಇದು ಭಾರತದ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಿದೆ. ಎರಡು ರಾಷ್ಟ್ರಗಳ ನಡುವೆ ಹೊಸ ಭಾವನಾತ್ಮಕ ಸಂಬಂಧ ಬೆಸೆಯಲು ಇದು ಕಾರಣವಾಗಿದೆ ಎಂದು ರವಿಶಂಕರ್ ಪ್ರಸಾದ್ ವಿಶ್ಲೇಷಣೆ ಮಾಡಿದರು. ಏಪ್ರಿಲ್ 18 ರಂದು ಇಂಗ್ಲೆಂಡ್ ರಾಣಿ ಮೋದಿಗೆ ಈ ಗಿಫ್ಟ್ ನೀಡಿದ್ದರು. ಭಾರತ ಸ್ವಾತಂತ್ರ್ಯ ಪಡೆದ ಕೆಲ ದಿನಗಳ ಬಳಿಕ ಅಂದರೆ 1947ರ ನವೆಂಬರ್ 20 ರಂದು ರಾಣಿಯ ಮದುವೆಯಾಗಿತ್ತು.[ಚಿತ್ರ: ಗೆಟ್ಟಿ ಇಮೇಜ್ಸ್]
