ಚೀನಾ ಅಥವಾ ಯಾವುದೇ ದೇಶದ ವಸ್ತುಗಳನ್ನು ನಿಷೇಧಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಕೇಂದ್ರ ವಾಣಿಜ್ಯ ವ್ಯವಹಾರಗಳ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ಭಾರತಕ್ಕೆ ಆಮದಾಗುವ ಎಲ್ಲಾ ಸಾಮಾಗ್ರಿಗಳು ದೇಶದ ಕಾನೂನು, ನೀತಿ-ನಿಯಮಾವಳಿಗಳು, ಆದೇಶಗಳು, ತಾಂತ್ರಿಕ ಗುಣಮಟ್ಟ, ಪರಿಸರ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳನ್ನು ಉಲ್ಲಂಘಿಸುವ ವಸ್ತುಗಳನ್ನು ನಿಷೇಧಿಸಬಹುದಾಗಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ತಿಳಿಸಿದ್ದಾರೆ.

ನವದೆಹಲಿ: ಚೀನಾ ಅಥವಾ ಯಾವುದೇ ದೇಶದ ವಸ್ತುಗಳನ್ನು ನಿಷೇಧಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದು ಕೇಂದ್ರ ವಾಣಿಜ್ಯ ವ್ಯವಹಾರಗಳ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.

ಭಾರತಕ್ಕೆ ಆಮದಾಗುವ ಎಲ್ಲಾ ಸಾಮಾಗ್ರಿಗಳು ದೇಶದ ಕಾನೂನು, ನೀತಿ-ನಿಯಮಾವಳಿಗಳು, ಆದೇಶಗಳು, ತಾಂತ್ರಿಕ ಗುಣಮಟ್ಟ, ಪರಿಸರ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳನ್ನು ಉಲ್ಲಂಘಿಸುವ ವಸ್ತುಗಳನ್ನು ನಿಷೇಧಿಸಬಹುದಾಗಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ತಿಳಿಸಿದ್ದಾರೆ.

ದೇಶದಲ್ಲಿ ತಯಾರಾಗುವ ಹಾಗೂ ವಿದೇಶಗಳಿಂದ ಆಮದಾಗುವ ಎಲ್ಲಾ ಉತ್ಪನ್ನಗಳ ಗುಣಮಟ್ಟದ ಮಾನದಂಡಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ರೂಪಿಸುತ್ತದೆ. ಬಿಐಎಸ್ ಕಡ್ಡಾಯ ನೋಂದಣಿ ಯೋಜನೆಯಡಿಯಲ್ಲಿ ಈಗಾಗಲೇ 109 ಉತ್ಪನ್ನಗಳು ಹಾಗೂ 30 ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿವೆ. ಉಕ್ಕು, ವಿದ್ಯುತ್ ಉಪಕರಣಗಳು, ಟ್ಯೂಬ್ & ಟೈರ್ ಮುಂತಾದವುಗಳನ್ನು ತಯಾರಿಸುವ 204 ಚೀನಾ ಕಂಪನಿಗಳಿಗೆ ಈವರೆಗೆ ಪರವಾನಿಗೆ ನೀಡಲಾಗಿದೆ. ಅದೇ ರೀತಿ, ಇಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಾಮಗ್ರಿಗಳನ್ನು ತಯಾರಿಸುವ 4636 ಚೀನಾ ಕಂಪನಿಗಳು ನೋಂದಣಿಯಾಗಿವೆ. ವರ್ಲ್ಡ್ ಟ್ರೇಡ್ ಆರ್ಗನೈಝೇಶನ್ (WTO) ಸದಸ್ಯನಾಗಿರುವ ನೆಲೆಯಲ್ಲಿ ಭಾರತದ ನಿಯಮಗಳು ಎಲ್ಲಾ ಸದಸ್ಯರಾಷ್ಟ್ರಗಳಿಗೆ ಅನ್ವಯವಾಗುತ್ತದೆ, ಎಂದು ಅವರು ಹೇಳಿದ್ದಾರೆ.