ವೀಸಾ ಇಲ್ಲದೆಯೇ ಈ ದೇಶಕ್ಕೆ ಹೋಗಬಹುದು

ದೋಹಾ(ಆ.09): ರಾಜತಾಂತ್ರಿಕ ಬಿಕ್ಕಟ್ಟುಗಳ ಪರಿಣಾಮ ತನ್ನ ಸುತ್ತಮುತ್ತಲ ರಾಷ್ಟ್ರಗಳಿಂದ ಪ್ರತ್ಯೇಕವಾಗಿರುವ ಕತಾರ್, ವೀಸಾ ಇಲ್ಲದ ಹೊರತಾಗಿಯೂ ಭಾರತ ಸೇರಿದಂತೆ ಇತರ 80 ರಾಷ್ಟ್ರಗಳ ಪ್ರಜೆಗಳಿಗೆ ದೇಶ ಪ್ರವೇಶ ನೀಡುವ ಬಗ್ಗೆ ಘೋಷಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೀಸಾ ಇಲ್ಲದೆ, ವಿದೇಶಿಗರ ಪ್ರವೇಶಕ್ಕೆ ಅನುಮತಿ ನೀಡಿದ ಕತಾರ್ ಈ ಪ್ರಾಂತ್ಯದಲ್ಲೇ ಅತಿ ಹೆಚ್ಚು ಮುಕ್ತ ರಾಷ್ಟ್ರವಾಗಲಿದೆ ಎಂದು ಅಲ್ಲಿನ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ವೀಸಾ ಇಲ್ಲದೆ ಕತಾರ್ ಪ್ರವೇಶಿಸಬಹುದಾದ 80ರಾಷ್ಟ್ರಗಳು ಯಾವುವು ಎಂಬುದರ ಬಗ್ಗೆ ಕತಾರ್ ಸ್ಪಷ್ಟನೆ ನೀಡಿಲ್ಲ. ಆದರೆ, 2022ರಲ್ಲಿ ಇಲ್ಲಿ ಆಯೋಜನೆಯಾಗಲಿರುವ ಫುಟ್‌ಬಾಲ್ ಪಂದ್ಯ ವೀಕ್ಷಕರಿಗೆ ಈ ನೂತನ ವೀಸಾ ಇಲ್ಲದ ಪ್ರಯಾಣ ಭಾರಿ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.