ದೋಹಾ (ಡಿ. 04):  15 ತೈಲ ರಫ್ತು ದೇಶಗಳ ಸಂಘಟನೆಯಾದ ‘ಒಪೆಕ್‌’ನಿಂದ ಹೊರಬರಲು, ತೈಲ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿರುವ ಕತಾರ್‌ ನಿರ್ಧರಿಸಿದೆ.

ಸೌದಿ ಅರೇಬಿಯಾ ಸೇರಿದಂತೆ ಹಲವು ಮಧ್ಯಪ್ರಾಚ್ಯ ದೇಶಗಳು ತನ್ನ ಮೇಲೆ ಹೇರಿರುವ ನಿರ್ಬಂಧ ಮತ್ತು ಹಗೆತನದಿಂದ ಬೇಸತ್ತಿರುವ ಕತಾರ್‌ ಈ ನಿರ್ಧಾರಕ್ಕೆ ಬಂದಿದೆ. 1960ರಲ್ಲಿ ಒಪೆಕ್‌ ಆರಂಭವಾದ ಬಳಿಕ ಇದೆ ಮೊದಲ ಬಾರಿಗೆ ಸದಸ್ಯ ದೇಶವೊಂದು ಸಂಘಟನೆಯಿಂದ ಹೊರಬಂದಿದೆ.

ಈ ನಿರ್ಧಾರದ ಬೆನ್ನಲ್ಲೇ, ದ್ರವೀಕೃತ ನೈಸಗಿರ್ಕ ಅನಿಲ ಉತ್ಪಾದನೆಯನ್ನು 77 ದಶಲಕ್ಷ ಟನ್‌ನಿಂದ 110 ದಶಲಕ್ಷ ಟನ್‌ಗೆ ಹಾಗೂ ಕಚ್ಚಾತೈಲ ಉತ್ಪಾದನೆಯನ್ನು 48 ಲಕ್ಷ ಬ್ಯಾರೆಲ್‌ನಿಂದ 65 ಲಕ್ಷ ಬ್ಯಾರೆಲ್‌ಗೆ ಹೆಚ್ಚಿಸುವ ನಿರ್ಧಾರವನ್ನು ಕೈಗೊಂಡಿದೆ. ಒಕ್ಕೂಟದ ಸದಸ್ಯ ದೇಶವಾಗಿದ್ದ ವೇಳೆ ಕತಾರ್‌ಗೆ ತೈಲೋತ್ಪನ್ನ ಉತ್ಪಾದನೆ ಮೇಲೆ ಮಿತಿ ಇತ್ತು.