ಸೌದಿ ಅರೇಬಿಯಾವನ್ನೇ ನೆಚ್ಚಿಕೊಂಡಿದ್ದ ಕತಾರ್‌ನಲ್ಲಿ ಈಗ ಆಹಾರ ಉತ್ಪನ್ನ, ಹಾಲು ಮೊದಲಾದವುಗಳ ಬರ ಆರಂಭವಾಗಿದೆ. ಅದಕ್ಕೆಂದೇ ಕತಾರಿ ಉದ್ಯಮಿಯೊಬ್ಬರು ವಿದೇಶಗಳಿಂದ 4 ಸಾವಿರ ಹಸುಗಳನ್ನು ಕತಾರ್‌ಗೇ ರಫ್ತು ಮಾಡುವ ಕಂಡು ಕೇಳರಿಯದ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ.

ದೋಹಾ: ಸೌದಿ ಅರೇಬಿಯಾ ಸೇರಿದಂತೆ ಹಲವು ಗಲ್ಫ್ ದೇಶಗಳು ತಮ್ಮ ಸೋದರ ದೇಶವಾದ ಕತಾರ್‌ ಮೇಲೆ ನಿರ್ಬಂಧ ಹೇರಿದ ಕೆಲವೇ ದಿನಗಳಲ್ಲಿ ಪುಟ್ಟ ಕೊಲ್ಲಿ ದೇಶದಲ್ಲಿ ಆಹಾರ ಸಮಸ್ಯೆ ತಲೆದೋರಿದೆ.

ಸೌದಿ ಅರೇಬಿಯಾವನ್ನೇ ನೆಚ್ಚಿಕೊಂಡಿದ್ದ ಕತಾರ್‌ನಲ್ಲಿ ಈಗ ಆಹಾರ ಉತ್ಪನ್ನ, ಹಾಲು ಮೊದಲಾದವುಗಳ ಬರ ಆರಂಭವಾಗಿದೆ. ಅದಕ್ಕೆಂದೇ ಕತಾರಿ ಉದ್ಯಮಿಯೊಬ್ಬರು ವಿದೇಶಗಳಿಂದ 4 ಸಾವಿರ ಹಸುಗಳನ್ನು ಕತಾರ್‌ಗೇ ರಫ್ತು ಮಾಡುವ ಕಂಡು ಕೇಳರಿಯದ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ.

ಆಸ್ಪ್ರೇಲಿಯಾ ಮತ್ತು ಅಮೆರಿಕದಲ್ಲಿ ಇಷ್ಟೊಂದು ಹಸುಗಳನ್ನು ವಿದ್ಯುತ್‌ ಉದ್ಯಮಿ ಮೌತಾಜ್‌ ಅಲ್‌ ಖಯ್ಯಾತ್‌ ಖರೀದಿಸಿದ್ದಾರೆ. ಇವುಗಳನ್ನು ಕತಾರ್‌ಗೆ ಸಾಗಿಸಬೇಕು ಎಂದರೆ ವಿಮಾನಗಳು 60 ಬಾರಿ ಹಾರಾಟ ನಡೆಸಬೇಕಂತೆ. ಕತಾರ್‌ ಹಾಲಿನ ಉತ್ಪನ್ನಗಳ ವಿಚಾರದಲ್ಲಿ ಸೌದಿ ಅರೇಬಿಯಾ ಮೇಲೆ ಅವಲಂಬಿತವಾಗಿತ್ತು.