ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂದರಿ ಮೊನಾಲಿಸಾಗೆ ಹೋಲಿಸಿದ್ದಂತ ಅತ್ಯಂತ ಭವ್ಯವಾದ ‘ದಿ ಪ್ಲಾಜಾ ಹೋಟೆಲ್‌’ನ ಶೇ.75 ಪಾಲನ್ನು ಖತಾರ್‌ ಸರ್ಕಾರ 4000 ಕೋಟಿ ರು.ಗೆ ಖರೀದಿಸಿದೆ.

ವಾಷಿಂಗ್ಟನ್‌: ಅಮೆರಿದಕ ನ್ಯೂಯಾರ್ಕ್ ನಗರದಲ್ಲಿದ್ದ ಸಹಾರಾ ಒಡೆತನದ ‘ದಿ ಪ್ಲಾಜಾ ಹೋಟೆಲ್‌’ನ ಶೇ.75 ಪಾಲನ್ನು ಖತಾರ್‌ ಸರ್ಕಾರ 4000 ಕೋಟಿ ರು.ಗೆ ಖರೀದಿಸಿದೆ.

ಹೀಗಾಗಿ ಸಹಾರಾ ಇಂಡಿಯಾದ ಒಡೆಯ ಸುಬ್ರಾತ್‌ ರಾಯ್‌ ಬಳಿ ಈಗ ಶೇ. 25 ಪಾಲು ಉಳಿದಿದೆ ಎಂದು ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ. ಸಹರಾ ಇಂಡಿಯಾದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. 

1907ರಲ್ಲಿ ಆರಂಭವಾಗಿದ್ದು, ‘ನ್ಯಾಷನಲ್‌ ರೆಜಿಸ್ಟ್ರಾರ್‌ ಫಾರ್‌ ಹಿಸ್ಟಾರಿಕ್‌ ಪ್ಲೇಸಸ್‌’ ಪಟ್ಟಿಯಲ್ಲಿರುವ ಏಕೈಕ ಹೋಟೆಲ್‌ ಇದಾಗಿದೆ. ಪ್ಲಾಜಾ ಹೋಟೆಲ್‌ ಅನ್ನು ಮಾರಾಟ ಮಾಡಲು ಕೆಲವು ವರ್ಷಗಳಿಂದ ಸಹರಾ ಕಂಪನಿ ಪ್ರಯತ್ನಿಸುತ್ತಿತ್ತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಹೋಟೆಲ್‌ ಅನ್ನು ಮೋನಾಲಿಸಾಗೆ ಹೋಲಿಸಿದ್ದರಂತೆ.