ಪಕ್ಷದ ನಾಯಕರ ಮೇಲೆ ಮುನಿಸಿಕೊಂಡು ಪಕ್ಷ ತೊರೆದಿದ್ದ ನಾಯಕ ಇದೀಗ ಮತ್ತೆ ಬಿಹೆಪಿಗೆ ವಾಪಸಾಗಿದ್ದಾರೆ.  

ಬೆಂಗಳೂರು : ಕೆಲ ತಿಂಗಳ ಹಿಂದೆ ವಿಧಾನಪರಿಷತ್‌ ಸದಸ್ಯ ಸ್ಥಾನ ನೀಡಲಿಲ್ಲ ಎಂದು ಪಕ್ಷದ ನಾಯಕತ್ವದ ಮೇಲೆ ಮುನಿಸಿಕೊಂಡಿದ್ದ ಮಾಜಿ ವಿಧಾನಪರಿಷತ್‌ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಸಮಾಧಾನಗೊಂಡಿದ್ದು, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಅವರು ಮುಂದುವರೆಯಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನಪರಿಷತ್‌ ಸದಸ್ಯರಾಗಿ ಮತ್ತೊಂದು ಅವಧಿಗೆ ಮುಂದುವರೆಸಲಿಲ್ಲ ಎಂದು ಬೇಸರಗೊಂಡು ಪುಟ್ಟಸ್ವಾಮಿ ಅವರು ತಮ್ಮ ರಾಜಕೀಯ ಗಾಡ್‌ಫಾದರ್‌ ಯಡಿಯೂರಪ್ಪ ವಿರುದ್ಧ ನೇರವಾಗಿ ಆಕ್ಷೇಪ ವ್ಯಕ್ತಪಡಿಸಿ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 

ಕೊನೆಗೆ ತಮ್ಮ ಆಪ್ತ ಬೆಂಬಲಿಗನ ಮೂಲಕ ಕೋಪ ತಣಿಸಿರುವ ಯಡಿಯೂರಪ್ಪ ಅವರು, ಮತ್ತೆ ಪುಟ್ಟಸ್ವಾಮಿಗೆ ಪಕ್ಷದ ಸಂಘಟನೆ ಹೊಣೆಗಾರಿಕೆ ನೀಡಿದ್ದಾರೆ.