ಪುಟ್ಟಣ್ಣಯ್ಯ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮನ; ಅಂತಿಮ ದರ್ಶನ ವೇಳೆ ಕುಸಿದು ಬಿದ್ದ ಮಕ್ಕಳು

First Published 22, Feb 2018, 9:35 AM IST
Puttannaih Cremation today at his Native
Highlights

ಕೆ.ಎಸ್.ಪುಟ್ಟಣ್ಣಯ್ಯ ಪಾರ್ಥಿವ ಶರೀರ  ಸ್ವಗ್ರಾಮ ಕ್ಯಾತನಹಳ್ಳಿ ತಲುಪಲಿದೆ. ಯಾವುದೇ ವಿಧಿವಿಧಾನಗಳಿಲ್ಲದೆ ​ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ನಡೆಯಲಿದೆ. ವಿದೇಶದಲ್ಲಿ ನೆಲೆಸಿರುವ ಮಕ್ಕಳು ಬರುವುದು ವಿಳಂಬವಾದ ಕಾರಣ ಇಂದು ಅಂತ್ಯಕ್ರಿಯೆ ನೆರವೇರಲಿದೆ. 

ಮಂಡ್ಯ (ಫೆ.22): ಕೆ.ಎಸ್.ಪುಟ್ಟಣ್ಣಯ್ಯ ಪಾರ್ಥಿವ ಶರೀರ  ಸ್ವಗ್ರಾಮ ಕ್ಯಾತನಹಳ್ಳಿ ತಲುಪಲಿದೆ. ಯಾವುದೇ ವಿಧಿವಿಧಾನಗಳಿಲ್ಲದೆ ​ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆ ನಡೆಯಲಿದೆ. ವಿದೇಶದಲ್ಲಿ ನೆಲೆಸಿರುವ ಮಕ್ಕಳು ಬರುವುದು ವಿಳಂಬವಾದ ಕಾರಣ ಇಂದು ಅಂತ್ಯಕ್ರಿಯೆ ನೆರವೇರಲಿದೆ. 
ರಾಜ್ಯದ ವಿವಿದೆಢೆಯಿಂದ ರೈತರು ತಂದ ಮಣ್ಣಿನೊಂದಿಗೆ ರೈತ ಗೀತೆ ಮೂಲಕ ಅಂತ್ಯ ಸಂಸ್ಕಾರ ನೆರವೇರಲಿದೆ.  ವಿವಿಧ ಗಣ್ಯರು ರೈತ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.  ಅಂತಿಮ ದರ್ಶನದ ವೇಳೆ ಪುಟ್ಟಣ್ಣಯ್ಯ ಮಕ್ಕಳಾದ ಸ್ಮಿತಾ ಮತ್ತು ಅಕ್ಷತಾ ಕುಸಿದು ಬಿದ್ದಿದ್ದಾರೆ. ಅಂತಿಮ ದರ್ಶನದ ಆ್ಯಂಬುಲೆನ್ಸ್’ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. 
ಪುಟ್ಟಣ್ಣಯ್ಯರ ಅಂತಿಮ ಸಂಸ್ಕಾರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪುಟ್ಟಣ್ಣಯ್ಯರ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಿದ್ದಾರೆ.  ಅಂತಿಮ ದರ್ಶನ ಪಡೆಯಲು ಬಂದಿರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 

loader