ರಾಹುಲ್‌ ಭೇಟಿ ಮಾಡಿದ ಪುಟ್ಟಣ್ಣಯ್ಯ ಪುತ್ರ ದರ್ಶನ್‌

First Published 26, Mar 2018, 7:35 AM IST
Puttannaiah Son Meet Rahul Gandhi
Highlights

ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆ ಪಾಂಡವಪುರಕ್ಕೆ ಆಗಮಿಸಿದಾಗ ಇತ್ತೀಚೆಗೆ ನಿಧನರಾದ ರೈತ ನಾಯಕ ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್‌ ಅಧ್ಯಕ್ಷರನ್ನು ಭೇಟಿಯಾದದ್ದು ವಿಶೇಷವಾಗಿತ್ತು.

ಪಾಂಡವಪುರ: ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆ ಪಾಂಡವಪುರಕ್ಕೆ ಆಗಮಿಸಿದಾಗ ಇತ್ತೀಚೆಗೆ ನಿಧನರಾದ ರೈತ ನಾಯಕ ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್‌ ಅಧ್ಯಕ್ಷರನ್ನು ಭೇಟಿಯಾದದ್ದು ವಿಶೇಷವಾಗಿತ್ತು.

ಪಾಂಡವಪುರ ತಾಲೂಕಿನ ರೈಲ್ವೆ ನಿಲ್ದಾಣದಲ್ಲಿ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿದ ದರ್ಶನ್‌ ಪುಟ್ಟಣ್ಣಯ್ಯ ರೈತರ ಪರವಾಗಿ ಮನವಿ ನೀಡಿದರು.

ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರಿಗಿಂತ ಹೆಚ್ಚಾಗಿ ರೈತಸಂಘದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದು ಹಸಿರು ಟವಲ್ ಬೀಸುವುದರ ಮೂಲಕ ರಾಹುಲ್ ಗಾಂಧಿಯನ್ನು ಸ್ವಾಗತಿಸಿದರು.

ದರ್ಶನ್‌ ಅವರನ್ನು ಸಿದ್ದರಾಮಯ್ಯ ಅವರು ರಾಹುಲ್‌ಗೆ ಪರಿಚಯಿಸಿದಾಗ ಬೆನ್ನು ತಟ್ಟಿದ ರಾಹುಲ್ ತಮ್ಮನ್ನು ಪ್ರತ್ಯೇಕವಾಗಿ ಭೇಟಿ ಮಾಡುವಂತೆ ಸೂಚಿಸಿದರು.

loader