ಮಣ್ಣಲ್ಲಿ ಮಣ್ಣಾದ ರೈತ ಹೋರಾಟಗಾರ ಕೆ.ಎಸ್ ಪುಟ್ಟಣ್ಣಯ್ಯ

First Published 22, Feb 2018, 12:54 PM IST
Puttannaiah cremation In Khyathanahalli
Highlights

ರೈತ ಹೋರಾಟಗಾರ ಕೆ.ಎಸ್ ಪುಟ್ಟಣ್ಣಯ್ಯ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಮಂಡ್ಯದ ಖ್ಯಾತನಹಳ್ಳಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿಸಲಾಗಿದೆ.

ಮಂಡ್ಯ :  ರೈತ ಹೋರಾಟಗಾರ ಕೆ.ಎಸ್ ಪುಟ್ಟಣ್ಣಯ್ಯ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಅವರ ಹುಟ್ಟೂರಾದ ಮಂಡ್ಯದ ಖ್ಯಾತನಹಳ್ಳಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿಸಲಾಗಿದೆ.

ಪಂಚಭೂತಗಳಲ್ಲಿ ರೈತ ಹೋರಾಟಗಾರ ಲೀನವಾಗಿದ್ದಾರೆ. ಪಟ್ಟಣ್ಣಯ್ಯ ಅವರ ತೋಟದಲ್ಲಿ ಮಣ್ಣು ಮಾಡಲಾಗಿದೆ.  ಈವೇಳೆ ರೈತ ಗೀತೆಯನ್ನು ಹಾಡಲಾಗಿದೆ.

ಕುಟುಂಬದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆದಿವೆ. ರಾಜ್ಯದ 30 ಜಿಲ್ಲೆಗಳ ಮಣ್ಣನ್ನು ತಂದು ಪುಟ್ಟಣ್ಣಯ್ಯ ಅವರ ಅಂತಿಮ ಸಂಸ್ಕಾರದ ವೇಳೆ ಅರ್ಪಿಸಲಾಗಿದೆ.

ಈ ವೇಳೆ ಸಾವಿರಾರು ಗಣ್ಯರು, ಅಭಿಮಾನಿಗಳೂ ಪುಟ್ಟಣ್ಣಯ್ಯ ಅವರ ಅಂತಿಮ ದರ್ಶನ ಪಡೆದರು.

loader