ರಷ್ಯಾದ ಮೇಲೆ ಅಮೆರಿಕ ಇತ್ತೀಚೆಗೆ ಹೊಸ ಕಠಿಣ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ, ಆ ದೇಶದ ರಾಯಭಾರ ಕಚೇರಿಗಳ 755 ಸಿಬ್ಬಂದಿ ದೇಶ ತೊರೆಯುವಂತೆ ರಷ್ಯಾ ಅಧ್ಯಕ್ಷ ವ್ಲಾದ್ಮಿರ್ ಪುತಿನ್ ಆದೇಶಿಸಿದ್ದಾರೆ.

ಮಾಸ್ಕೊ(ಜು.31): ರಷ್ಯಾದ ಮೇಲೆ ಅಮೆರಿಕ ಇತ್ತೀಚೆಗೆ ಹೊಸ ಕಠಿಣ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ, ಆ ದೇಶದ ರಾಯಭಾರ ಕಚೇರಿಗಳ 755 ಸಿಬ್ಬಂದಿ ದೇಶ ತೊರೆಯುವಂತೆ ರಷ್ಯಾ ಅಧ್ಯಕ್ಷ ವ್ಲಾದ್ಮಿರ್ ಪುತಿನ್ ಆದೇಶಿಸಿದ್ದಾರೆ.

ಅಮೆರಿಕದಲ್ಲಿ ರಷ್ಯಾ 455 ದೂತಾವಾಸ ಸಿಬ್ಬಂದಿ ಹೊಂದಿದೆ. ಅಮೆರಿಕ ಕೂಡ ಸೆಪ್ಟಂಬರ್ ಒಳಗೆ ತನ್ನ ಸಿಬ್ಬಂದಿ ಸಂಖ್ಯೆಯನ್ನು 455ಕ್ಕೆ ಇಳಿಕೆ ಮಾಡುವಂತೆ ರಷ್ಯಾ ಸೂಚಿಸಿದೆ. ಅಮೆರಿಕದ ರಾಯಭಾರ ಕಚೇರಿ ಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅಮೆರಿಕದ 755 ಮಂದಿ ರಷ್ಯಾದಲ್ಲಿನ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಪುತಿನ್ ಹೇಳಿದ್ದಾರೆ.

‘ಅಮೆರಿಕ ಕೈಗೊಂಡಿರುವ ಕ್ರಮಗಳನ್ನು ಮುಖ್ಯ ವಾಗಿ ಗಮನಿಸಬೇಕಾಗಿದೆ. ರಷ್ಯಾದೊಂದಿಗೆ ಸಂಬಂ‘ ಬಯಸುವ ಮತ್ತು ಅದನ್ನು ಅಭಿವೃದ್ಧಿಪಡಿಸುವ ಆಸಕ್ತಿ ಹೊಂದಿರುವ ನಮ್ಮ ಮಿತ್ರ ದೇಶಗಳು ಸೇರಿದಂತೆ ಜಗತ್ತಿನ ಇತರ ದೇಶಗಳ ಮೇಲೂ, ಈ ಕಾನೂನುಬಾಹಿರ ನಿರ್ಬಂಭಗಳು ಪರಿಣಾಮ ಬೀರಬಹುದು’ ಎಂದು ಪುತಿನ್ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಪರಿಸ್ಥಿತಿ ಬದಲಾಗಬಹುದು ಎಂಬ ಭರವಸೆ ನಮಗಿತ್ತು ಆದರೆ ಸದ್ಯದಲ್ಲೇ ಯಾವುದೇ ಬದಲಾವಣೆಗಳಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ನಾವು ಯಾವುದಕ್ಕೂ ಉತ್ತರ ನೀಡದೆ ಬಿಡುವುದಿಲ್ಲ ಎಂಬುದನ್ನು ತೋರಿಸಲು ಇದು ಸರಿಯಾದ ಸಮಯ’ ಎಂದೂ ಪುತಿನ್ ಹೇಳಿದ್ದಾರೆ.

ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ವಿರುದ್ಧ ಕಳೆದ ವಾರ ಅಮೆರಿಕದ ಸಂಸತ್ತಿನಲ್ಲಿ ಕೆಲವು ಹೊಸ ನಿರ್ಬಂ‘ಗಳಿಗೆ ಅನುಮೋದನೆ ದೊರಕಿತ್ತು.