ಕಾಲಿಂಗ-ಉತ್ಕಾಲ್ ಎಕ್ಸ್’ಪ್ರೆಸ್’ನ 10 ಭೋಗಿಗಳು ಹಳಿತಪ್ಪಿದ್ದು ಕನಿಷ್ಟ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ನವದೆಹಲಿ (ಆ.19): ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಕಾಲಿಂಗ-ಉತ್ಕಾಲ್ ಎಕ್ಸ್’ಪ್ರೆಸ್’ನ 10 ಭೋಗಿಗಳು ಹಳಿತಪ್ಪಿದ್ದು ಕನಿಷ್ಟ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಉತ್ಕಾಲ್ ಎಕ್ಸ್’ಪ್ರೆಸ್ ಪುರಿಯಿಂದ ಹರಿದ್ವಾರ-ಕಾಳಿಂಗ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ಮುಜಫ್ಫರ್ ನಗರದ ಬಳಿ ಹಳಿ ತಪ್ಪಿದೆ. ಜಿಲ್ಲಾಡಳಿತವು ರಕ್ಷಣಾ ಕಾರ್ಯವನ್ನು ಆರಂಭಿಸಿದ್ದು ಎನ್’ಡಿಆರ್’ಎಫ್ ಪಡೆಯನ್ನು ದೆಹಲಿಯಿಂದ ಕಳುಹಿಸಲಾಗಿದೆ. ಭೋಗಿಗಳಡಿಯಲ್ಲಿ ಸಿಲುಕಿಕೊಂಡವರ ಮಾಹಿತಿಯಿನ್ನೂ ಲಭ್ಯವಾಗಿಲ್ಲ. ರೈಲು ದುರಂತದ ಬಗ್ಗೆ ರೈಲ್ವೆ ಸಚಿವ ಸುರೇಶ್ ಪ್ರಭು ತನಿಖೆಗೆ ಆದೇಶಿಸಿದ್ದಾರೆ. ರೈಲ್ವೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
