ಗದಗ ಜಿಲ್ಲೆಯಲ್ಲಿ ಈ ಹಿಂದೆ ಕುಡಿಯುವ ನೀರಿಗಾಗಿ ಸಾಕಷ್ಟು ಹಾಹಾಕಾರ ಎದುರಾಗಿತ್ತು. ಅನೇಕ ದಶಕಗಳಿಂದ ಗದಗ ಬೆಟಗೇರಿ ಅವಳಿ ನಗರ ಹಾಗೂ ಜಿಲ್ಲೆಯ ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ಪಣತೊಟ್ಟವರು ಸಚಿವ ಎಚ್​.ಕೆ. ಪಾಟೀಲ್​. ತಾಲೂಕಿನ ಮಹತ್ವದ ಪಾಪನಾಶಿಯಲ್ಲಿ  ಇವತ್ತು ನೀರು ಶುದ್ಧಿಕರಣ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ  ನೀಡಿದ್ದಾರೆ. ಈ ಮೂಲಕ ದಶಕಗಳ ಬೇಡಿಕೆ ಈಡೇರಿದೆ.

ಗದಗ(ಜೂ.04): ಮುದ್ರಣಾ ಕಾಶಿ ಗದಗ ಜಿಲ್ಲೆ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿ ಇಡೀ ರಾಜ್ಯಕ್ಕೆ ಗದಗ ಜಿಲ್ಲೆ ಮಾದರಿಯಾಗಿದೆ. ಅಭಿವೃದ್ಧಿಯ ಇಚ್ಚಾಶಕ್ತಿ ಹೊಂದಿದ ಸಚಿವ ಎಚ್.​ಕೆ. ಪಾಟೀಲರ ಭಗೀರಥ ಪ್ರಯತ್ನ ಸಾರ್ಥಕವಾಗಿದೆ.

 ಗದಗ ಜಿಲ್ಲೆಯಲ್ಲಿ ಈ ಹಿಂದೆ ಕುಡಿಯುವ ನೀರಿಗಾಗಿ ಸಾಕಷ್ಟು ಹಾಹಾಕಾರ ಎದುರಾಗಿತ್ತು. ಅನೇಕ ದಶಕಗಳಿಂದ ಗದಗ ಬೆಟಗೇರಿ ಅವಳಿ ನಗರ ಹಾಗೂ ಜಿಲ್ಲೆಯ ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ಪಣತೊಟ್ಟವರು ಸಚಿವ ಎಚ್​.ಕೆ. ಪಾಟೀಲ್​. ತಾಲೂಕಿನ ಮಹತ್ವದ ಪಾಪನಾಶಿಯಲ್ಲಿ ಇವತ್ತು ನೀರು ಶುದ್ಧಿಕರಣ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ಮೂಲಕ ದಶಕಗಳ ಬೇಡಿಕೆ ಈಡೇರಿದೆ.

2 ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಗ್ರೀನ್ ಸಿಗ್ನಲ್ ದೊರೆತಿದ್ದು, ಪೈಪ್ ಲೈನ್ ಅಳವಡಿಕೆಗೆ 72 ಕೋಟಿ ರೂ. ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಎರಡನೇ ಹಂತದ ಕುಡಿಯೋ ನೀರಿನ ಯೋಜನೆ ಲೋಕಾರ್ಪಣೆಯಿಂದ ಗದಗ- ಬೆಟಗೇರಿ ಅವಳಿ ನಗರದ ಜನರ ನೀರಿನ ಬವಣೆ ನೀಗಿದಂತಾಗಿದೆ.

ಇನ್ನು ಇದೇ ವೇಳೆ ಸಿ ಎಂ. ಸಿದ್ದರಾಮಯ್ಯ ಸಸಿ ನೆಡುವ ಮೂಲಕ ಅನೇಕ ಯೋಜನಗಳನ್ನ ಉದ್ಘಾಟಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್, ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಸಚಿವರು, ಶಾಸಕರು ಸಾಕ್ಷಿಯಾದರು.

ದಶಕಗಳ ಬೇಡಿಕೆಯ ಮಹತ್ವದ ಕುಡಿಯುವ ನೀರು ಸೇರಿದಂತೆ ಇನ್ನೂ ಹಲವು ಯೋಜನೆಗಳಿಗೆ ಸಿಎಂ ಚಾಲನೆ ನೀಡಿದರು. ಗದಗ ಜಿಲ್ಲೆಯನ್ನ ಎಚ್​.ಕೆ. ಪಾಟೀಲರು, ಮಾದರಿ ಜಿಲ್ಲೆಯನ್ನಾಗಿ ಮಾಡೋ ಪಣ ತೊಟ್ಟಿದ್ದಾರೆ. ಅವರ ಇಚ್ಛಾಶಕ್ತಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.