ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಕುಟುಂಬ ಸಮೇತ ನಾಳೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದು, 5.6 ಕೋಟಿ ರೂ. ಮೊತ್ತದ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ತಿಮ್ಮಪ್ಪನಿಗೆ ಸಮರ್ಪಿಸಲಿದ್ದಾರೆ.
ಹೈದರಾಬಾದ್ (ಫೆ.21): ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಕುಟುಂಬ ಸಮೇತ ನಾಳೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದು, 5.6 ಕೋಟಿ ರೂ. ಮೊತ್ತದ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ತಿಮ್ಮಪ್ಪನಿಗೆ ಸಮರ್ಪಿಸಲಿದ್ದಾರೆ.
ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎನ್ನುವ ಪ್ರಚಾರದ ಮುಂದಾಳತ್ವವನ್ನು ವಹಿಸಿಕೊಂಡಿದ್ದ ಚಂದ್ರಶೇಖರ್ ರಾವ್ , ತಮ್ಮ ಆಕಾಂಕ್ಷೆ ಈಡೇರಲಿ ಎಂದು ತಿರುಪತಿಗೆ ಹರಕೆ ಹೊತ್ತಿದ್ದರು. ಹಾಗಾಗಿ ಸಕುಟುಂಬ ಸಮೇತರಾಗಿ ಇಂದು ಸಂಜೆ ತಿರುಪತಿಗೆ ಪ್ರಯಾಣ ಬೆಳೆಸಲಿದ್ದು ನಾಳೆ ಹರಕೆ ಪೂಜೆ ಈಡೇರಿಸಲಿದ್ದಾರೆ. ಆಂಧ್ರ ಪ್ರದೇಶದಿಂದ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದ್ದಾರೆ.
ಪದ್ಮಾವತಿಗೆ ಚಿನ್ನದ ಮೂಗುತಿಯನ್ನು ಸಮರ್ಪಿಸಲಿದ್ದಾರೆ. ಕುರವಿಯಲ್ಲಿರುವ ವೀರಭದ್ರಸ್ವಾಮಿ ದೇವಾಲಯಕ್ಕೆ ಈ ವಾರ ಶುದ್ಧ ಚಿನ್ನದ ಮೀಸೆಯನ್ನು ನೀಡಲಿದ್ದಾರೆ.
