ಚಂಡೀಗಢ[23]  ಪಂಜಾಬ್ ನ ಪೊಲೀಸ್ ಕಾನ್ ಸ್ಟೇಬಲ್ ಅಶೋಕ್ ಕುಮಾರ್ ಅವರು ಅಲ್ಲಿನ ರಾಜ್ಯ ಸರಕಾರದ ಹೊಸ ವರ್ಷದ ಲೊಹ್ರಿ ಬಂಪರ್ ಡ್ರಾ ತಮ್ಮದಾಗಿಸಿಕೊಂಡಿದ್ದು, ಎರಡು ಕೋಟಿ ರು.ಗೆದ್ದಿದ್ದಾರೆ.

ಮೂವತ್ತು ವರ್ಷದ ಅಶೋಕ್ ಕುಮಾರ್ ಪಂಜಾಬ್ ನ ಹೋಶಿಯಾರ್ ಪುರ್ ಜಿಲ್ಲೆಯ ಮೋಟಿಯಾನ್ ಹಳ್ಳಿಯವರು. ಲಾಟರಿ ಟಿಕೆಟ್ ಎಲ್ಲಿ ಇಟ್ಟಿದ್ದೇನೆ ಎಂಬುದನ್ನೇ ಪೊಲೀಸ್ ಪೇದೆ ಮರೆತೇ ಬಿಟ್ಟಿದ್ದರು. ನಂತರ ಪೊಲೀಸ್ ಠಾಣೆಯಲ್ಲಿನ ಡೆಸ್ಕ್ ಡ್ರಾವರ್ ನಲ್ಲಿ ಲಾಟರಿ ಟಿಕೆಟ್ ಇಟ್ಟಿದ್ದು ನೆನಪಾಗಿದೆ.

ಒಟ್ಟಿನಲ್ಲಿ ಕನಸಿನಲ್ಲಿಯೂ  ಎಣಿಕೆ ಮಾಡದ ರೀತಿ ಪೊಲೀಸ್ ಪೇದೆ ಒಂದೇ ದಿನಕ್ಕೆ ಕೋಟ್ಯಧಿಪತಿಯಾಗಿದ್ದಾರೆ.