ಮನೆಯಲ್ಲಿ 9 ಮಂದಿ, ಸಿಕ್ಕ ಮತಗಳು 5: ಕಣ್ಣೀರು ಹರಿಸಿದ ಅಭ್ಯರ್ಥಿ!| ಮತ ಎಣಿಕೆ ಕೇಂದ್ರದಲ್ಲಿದ್ದವರೆಲ್ಲಾ ಸುಸ್ತು

ಜಲಾಂಧರ್[ಮೇ.24]: ಬಹುನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾಗ ಹೊರ ಬಿದ್ದಿದ್ದು, ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಆದರೆ ಜಲಾಂಧರ್ ನ ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ ಮಾತ್ರವಲ್ಲದೇ, ಓರ್ವ ಅಭ್ಯರ್ಥಿಯೂ ಭಾರೀ ಸೌಂಡ್ ಮಾಡಿದ್ದಾರೆ. ಶಟರ್ ಉದ್ಯಮ ಮಾಡಿಕೊಂಡಿದ್ದ ನೀತೂ ಶಟ್ರಾಂವಾಲಾ ಗುರುವಾರದಂದು ಅಳುತ್ತಲೇ ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದ್ದಾರೆ. ಇದಕ್ಕೆ ಕಾರಣವಗಿದ್ದು ಕೇವಲ ಚುನಾವಣೆಯಲ್ಲಿ ಸಿಕ್ಕ ಸೋಲು.

ಮನೆಯಲ್ಲಿರುವ ಕುಟುಂಬ ಸದಸ್ಯರು 9 ಆದರೆ ಪಡೆದ ಮತ 5

ಅಳುತ್ತಲೇ ಪ್ರತಿಕ್ರಿಯಿಸಿದ ನೀತು 'ನನ್ನ ಕುಟುಂಬದಲ್ಲಿ 9 ಮಂದಿ ಸದಸ್ಯರಿದ್ದಾರೆ. ಆದರೆ ನನಗೆ ಸಿಕ್ಕಿದ್ದು ಕೇವಲ 5 ಮತಗಳು ಇದು ನನಗೆ ಆಘಾತ ನೀಡಿದೆ. ನಾನಿರುವ ಗಲ್ಲಿಯ ಜನರೂ ನನಗೇ ಮತ ನೀಡುವುದಾಗಿ ತಿಳಿಸಿದ್ದರು. ಆದರೆ ಸಿಕ್ಕಿದ್ದು ಕೇವಲ 5 ಮತಗಳು. ಒಂದು ತಿಂಗಳು ನನ್ನ ಅಂಗಡಿಯನ್ನು ಮುಚ್ಚಿ, ಜನರ ಬಳಿ ತೆರಳಿ ಕೆಲಸ ಮಾಡಿದೆ. ಆದರೆ ಅವರಾರೂ ನನಗೆ ಮತ ನೀಡಿಲ್ಲ' ಎಂದಿದ್ದಾರೆ. ಸೋಲನುಭವಿಸಿರುವ ನೀತೂ ಇನ್ಮುಂದೆ ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಿದ್ದಾರೆ.

Scroll to load tweet…

ಸುದ್ದಿಯಾಗಿದ್ದು ಹೇಗೆ?

ನೀತೂ ಮತ ಎಣಿಕೆ ಕೇಂದ್ರದಲ್ಲೇ ಅಳಲಾರಂಭಿಸಿದ್ದರು ಹಾಗೂ ಜನರು ಆಗಲೇ ಅವರ ಮಾತುಗಳನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾರಂಭಿಸಿದ್ದರು. ಆದರೆ ಇದಾದ ಬಳಿಕ ಅವರು ತಮ್ಮ ಸೋಲನ್ನು ಮೊದಲೇ ನಿರೀಕ್ಷಿಸಿದ್ದರೆಂದು ತಿಳಿದು ಬಂದಿದೆ. ದಿನದಾಂತ್ಯಕ್ಕೆ ಅವರು ಕೇವಲ 856 ಮತ ಗಳಿಸುವಲ್ಲಿ ಯಶಶ್ವಿಯಾಗಿದ್ದರು. ಕೆಲ ಸಮಯದ ಹಿಂದಷ್ಟೇ ನೀತೂ ಮೊಬೈಲ್ ಪೋನ್ ಒಂದರಲ್ಲಿ ಬಾಂಬ್ ಇದೆ ಎನ್ನುವ ಮೂಲಕ ಸದ್ದು ಮಾಡಿದ್ದರು. ಇದಾದ ಬಳಿಕ ಫೇಮಸ್ ಆಗಿದ್ದ ನೀತೂ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು.

Scroll to load tweet…
Scroll to load tweet…

ಸದ್ಯ ಈ ಅಭ್ಯರ್ಥಿಯ 'ದುಃಖ ಭರಿತ' ಕತೆ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.