ಪಂಜಾಬ್ ನೂತನ ಸರ್ಕಾರದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ನಡೆದ ಮೊದಲ ಶಾಸಕಾಂಗ ಸಭೆಯಲ್ಲಿ ವಿಐಪಿ ಸಂಸ್ಕೃತಿಯನ್ನು ಸಂಪೂರ್ಣ ತೊಡೆದು ಹಾಕಲು ನಿರ್ಧರಿಸಲಾಗಿದ್ದು ಅವರ ಅಧಿಕೃತ ವಾಹನಗಳಿಂದ ಕೆಂಪು, ಹಳದಿ ಮತ್ತು ನೀಲಿ ಬಣ್ಣದ ದೀಪಗಳನ್ನು ತೆಗೆದು ಹಾಕಲು ತೀರ್ಮಾನಿಸಲಾಗಿದೆ.
ನವದೆಹಲಿ (ಮಾ.18): ಪಂಜಾಬ್ ನೂತನ ಸರ್ಕಾರದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ನಡೆದ ಮೊದಲ ಶಾಸಕಾಂಗ ಸಭೆಯಲ್ಲಿ ವಿಐಪಿ ಸಂಸ್ಕೃತಿಯನ್ನು ಸಂಪೂರ್ಣ ತೊಡೆದು ಹಾಕಲು ನಿರ್ಧರಿಸಲಾಗಿದ್ದು ಅವರ ಅಧಿಕೃತ ವಾಹನಗಳಿಂದ ಕೆಂಪು, ಹಳದಿ ಮತ್ತು ನೀಲಿ ಬಣ್ಣದ ದೀಪಗಳನ್ನು ತೆಗೆದು ಹಾಕಲು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ವಿಐಪಿ ಸಂಸ್ಕೃತಿಯನ್ನು ತೆಗೆದು ಹಾಕಲು ನಮ್ಮ ಶಾಸಕಾಂಗದಲ್ಲಿ ಅವಿರೋಧವಾಗಿ ನಿರ್ಧರಿಸಿದ್ದೇವೆ. ಎಲ್ಲಾ ಶಾಸಕರು ಹಾಗೂ ಅಧಿಕಾರಿಗಳ ವಾಹನಗಳಿಂದ ಬೀಕಾನ್ ದೀಪಗಳನ್ನು ತೆಗೆದು ಹಾಕಲಾಗುತ್ತದೆ ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಅದೇ ರೀತಿ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಕಡಿಮೆ ಮಾಡಲು ಮತ್ತು ನೂತನ ಅಬಕಾರಿ ನೀತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಗುತ್ತಿಗೆ ಆಧಾರಿತ ನೇಮಕಾತಿ ಸೇರಿದಂತೆ ಸರ್ಕಾರಿ ಎಲ್ಲಾ ಹುದ್ದೆಗಳಲ್ಲೂ ಶೇ.33 ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ.
