ನವದೆಹಲಿ[ಫೆ.18] ಪಂಜಾಬ್ ಸರಕಾರ ಜನರಿಗೆ ಭರ್ಜರಿ ಕೊಡುಗೆ ನೀಡಿದೆ. ಪೆಟ್ರೋಲ್ ದರದಲ್ಲಿ 5 ರೂ. ಮತ್ತು ಡಿಸೇಲ್ ದರದಲ್ಲಿ 1 ರೂ ಇಳಿಕೆ ಮಾಡಿದೆ.

ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ರಾಜ್ಯದ 158493 ಕೋಟಿ ರೂ. ವೆಚ್ಚದ ಬಜೆಟ್ ಮಂಡನೆ ಮಾಡಿದ್ದು ಜನರಿಗೆ ಭರ್ಜರಿ ಕೊಡಿಗೆ ನೀಡಿದ್ದಾರೆ.

ತೖಲ ದರ ಕಳೆದ 5 ದಿನಗಳಿಂದ ನಿರಂತರ ಇಳಿಕೆಯಾಗುತ್ತಿದೆ. ಆದರೆ ಪಂಜಾಬ್ ಸರ್ಕಾರ ನೀಡಿರುವ ಈ ಕೊಡುಗೆ ಮಾತ್ರ ಲ್ಲಿನ ಜನರಿಗೆ ಸಾಕಷ್ಟು ಸಹಾಯ ಮಾಡುವುದರಲ್ಲಿ ಅನುಮಾನ ಇಲ್ಲ.