ಪುನೀತ್ ನಿವಾಸದಲ್ಲಿ ಮದ್ಯರಾತ್ರಿ 12ರ ಗಂಟೆಗೆ ಹೊತ್ತಿಗೆ ಪುನೀತ್ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪವರ್ ಸ್ಟಾರ್ ಪುನೀತ್ರಾಜ್ ಕುಮಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 42ನ ವಸಂತಕ್ಕೆ ಕಾಲಿರಿಸಿರುವ ಪವರ್ಸ್ಟಾರ್ ಗೆ ಶುಭಾಷಯ ಕೋರಲು ಪುನೀತ್ ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರೋ ಪುನೀತ್ ನಿವಾಸದಲ್ಲಿ ಮದ್ಯರಾತ್ರಿ 12ರ ಗಂಟೆಗೆ ಹೊತ್ತಿಗೆ ಪುನೀತ್ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇನ್ನು ವಿಶ್ ಮಾಡಲು ಮನೆ ಮುಂದೆ ಜಮಾಸಿದ್ದ ಅಭಿಮಾನಿಗಳ ಜೊತೆ ಪವರ್ ಸ್ಟಾರ್ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಇನ್ನು ಇದೇ ವೇಳೆ ಮಾತನಾಡಿದ ಪವರ್ಸ್ಟಾರ್ ಪ್ರತಿ ವರ್ಷಕ್ಕಿಂತ ಈ ಈ ವರ್ಷ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದೆ, ಅವರ ಹಾರೈಕೆ ಮತ್ತು ಆರ್ಶಿವಾದ ಹೀಗೆ ನಮ್ಮ ಮೇಲೆ ಇರಲಿ ಎಂದು ಅಭಿಮಾನಿಗಳನ್ನ ಕೇಳಿಕೊಂಡ್ರು.
