ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೂಪರ್ ಸ್ಟಾರ್ ನಟನಾಗಿದ್ರು ಕೂಡ  ಕಷ್ಟದಲ್ಲಿರುವ ಅಭಿಮಾನಿಗಳಿಗೆ ಹಾಗೂ ನೊಂದ ಜನರಿಗೆ ಸಹಾಯ ಮಾಡುವ ರಾಜಕುಮಾರ ಅಂತಾ ಕರಿಸಿಕೊಂಡಿದ್ದಾರೆ. ಆಗಾಗ ಸಮಾಜಿಕ ಕಳಕಳಿಯ ಕೆಲಸಗಳಲ್ಲಿ ಗುರುತಿಸಿಕೊಳ್ಳುವ ಈ ರಾಜರತ್ನ ಸ್ಲಂ ಮಕ್ಕಳು ಮಾಡಿರೋ ಸಾಧನೆಗೆ ಕೈ ಜೋಡಿಸಿದ್ದಾರೆ. ನಾಡ್ಜ್ ಗುರುಕುಲ ಫೌಂಡೇಶನ್ ಸಂಸ್ಥೆ, ಕರ್ನಾಟಕದ ಕೆಲ ಸ್ಲಂಗಳಲ್ಲಿ 18ರಿಂದ 26 ವರ್ಷದ ಯುವಕ ಯುವತಿಯರಿಗೆ ಶಿಕ್ಷಣ, ಬ್ಯೂಟಿಶಿಯನ್, ಡ್ರೈವಿಂಗ್, ಎಲೆಕ್ಟ್ರಾನಿಕ್ ಕೆಲಸದ ಬಗ್ಗೆ ತರಬೇತಿ ನೀಡಿ ಕೆಲಸ ಕೊಡಿಸುವ ಕಾರ್ಯ ಮಾಡುತ್ತಿದೆ. ಇಂತಹ ಸಾಮಾಜಿಕ ಕಾರ್ಯ ಕೆಲಸದಲ್ಲಿ ಪುನೀತ್ ರಾಜ್'ಕುಮಾರ್ ಒಂದು ರೂಪಾಯಿ ಸಂಭಾವನೆ ಪಡೆಯದೆ ಈ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ಬೆಂಗಳೂರು(ಜು.24): ಅತಿ ಹೆಚ್ಚು ಸಕ್ಸಸ್ ಸಿನಿಮಾ ಕೊಟ್ಟ ಸ್ಟಾರ್ ಪವರ್'ಸ್ಟಾರ್ ಪುನೀತ್ ರಾಜ್'ಕುಮಾರ್. ತಮ್ಮ ಸ್ಮೈಲ್, ಡ್ಯಾನ್ಸಿಂಗ್ ಹಾಗೂ ಆಕ್ಷನ್'ನಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದಿರುವ ಪವರ್'ಸ್ಟಾರ್ ಕನ್ನಡ ಚಿತ್ರರಂಗದ ನಂಬರ್ ಒನ್ ಸ್ಟಾರ್. ರಾಜಕುಮಾರ ಸಿನಿಮಾ ಮೂಲಕ ಗಾಂಧಿನಗರದಲ್ಲಿ ಆಲ್'ಟೈಮ್ ಬಾಕ್ಸ್ ಆಫೀಸ್ ರೆಕಾರ್ಡ್ ಮುರಿದಿರುವ ನಟ. ಪವರ್'ಸ್ಟಾರ್ ಬಗ್ಗೆ ನಿಮಗೆ ಗೊತ್ತಿಲ್ಲದ ಮತ್ತೊಂದು ಮುಖ ಅನಾವರಣ ಆಗಿದೆ.

ಸ್ಲಂಗೂ ಪುನೀತ್ ಏನು ಸಂಬಂಧ?
ಕನ್ನಡ ಚಿತ್ರರಂಗದ ಮಟ್ಟಿಗೆ ಬರೋಬ್ಬರಿ ಏಳು ಕೋಟಿ ರೂ ಸಂಭಾವನೆ ಪಡೆಯುವ ಪುನೀತ್ ರಾಜ್'ಕುಮಾರ್, ಕ್ಯಾಮರಾ ಹಿಂದೆ ಮಾಡಿರುವ ಕೆಲಸದ ಬಗ್ಗೆ ನೀವು ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಿ. ಪುನೀತ್ ಒಂದು ನಯಾ ಪೈಸೆ ಮುಟ್ಟದೆ ಈ ಕೆಲಸ ಮಾಡಿದ್ರಾ ಎಂದು ಶಾಕ್ ಆಗ್ತೀರಿ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೂಪರ್ ಸ್ಟಾರ್ ನಟನಾಗಿದ್ರು ಕೂಡ ಕಷ್ಟದಲ್ಲಿರುವ ಅಭಿಮಾನಿಗಳಿಗೆ ಹಾಗೂ ನೊಂದ ಜನರಿಗೆ ಸಹಾಯ ಮಾಡುವ ರಾಜಕುಮಾರ ಅಂತಾ ಕರಿಸಿಕೊಂಡಿದ್ದಾರೆ. ಆಗಾಗ ಸಮಾಜಿಕ ಕಳಕಳಿಯ ಕೆಲಸಗಳಲ್ಲಿ ಗುರುತಿಸಿಕೊಳ್ಳುವ ಈ ರಾಜರತ್ನ ಸ್ಲಂ ಮಕ್ಕಳು ಮಾಡಿರೋ ಸಾಧನೆಗೆ ಕೈ ಜೋಡಿಸಿದ್ದಾರೆ. ನಾಡ್ಜ್ ಗುರುಕುಲ ಫೌಂಡೇಶನ್ ಸಂಸ್ಥೆ, ಕರ್ನಾಟಕದ ಕೆಲ ಸ್ಲಂಗಳಲ್ಲಿ 18ರಿಂದ 26 ವರ್ಷದ ಯುವಕ ಯುವತಿಯರಿಗೆ ಶಿಕ್ಷಣ, ಬ್ಯೂಟಿಶಿಯನ್, ಡ್ರೈವಿಂಗ್, ಎಲೆಕ್ಟ್ರಾನಿಕ್ ಕೆಲಸದ ಬಗ್ಗೆ ತರಬೇತಿ ನೀಡಿ ಕೆಲಸ ಕೊಡಿಸುವ ಕಾರ್ಯ ಮಾಡುತ್ತಿದೆ. ಇಂತಹ ಸಾಮಾಜಿಕ ಕಾರ್ಯ ಕೆಲಸದಲ್ಲಿ ಪುನೀತ್ ರಾಜ್'ಕುಮಾರ್ ಒಂದು ರೂಪಾಯಿ ಸಂಭಾವನೆ ಪಡೆಯದೆ ಈ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ಒಟ್ಟಾರೆ ಡಾ.ರಾಜ್'ಕುಮಾರನಂತೆ, ಪವರ್'ಸ್ಟಾರ್ ಪುನೀತ್ ರಾಜ್'ಕುಮಾರ್ "ಅಭಿಮಾನಿಗಳೇ ನಮ್ಮನೇ ದೇವ್ರು" ಅಂತಾ ನಂಬಿದ್ದಾರೆ ಅನ್ನೋದಿಕ್ಕೆ ಈ ಸಮಾಜ ಮುಖಿ ಕೆಲಸಗಳೇ ಸಾಕ್ಷಿ.

- ರವಿಕುಮಾರ್, ಎಂಕೆ, ಸುವರ್ಣ ನ್ಯೂಸ್