ಪವರ್ ಸ್ಟಾರ್ ಪುನೀತ್ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಗೂ ಅಪ್ಪು ಅಂದರೆ ಪಂಚಪ್ರಾಣ. ಅದರಂತೆ ಕಳೆದ ಕಲವು ತಿಂಗಳ ಹಿಂದೆ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಪ್ರೀತಿ ಹೆಸರಿನ ಪುಟ್ಟ ಅಭಿಮಾನಿ ಪುನಿತ್ ನೋಡುವ ಆಸೆ ಪಟ್ಟಿದ್ದಳು. ಅದನ್ನು ಸಾಧ್ಯವಾಗಿಸಿದ್ದ ಪುನೀತ್ ಪ್ರೀತಿಗೆ ಮಾತು ಕೊಟ್ಟಂತೆ ಸಹಾಯ ಹಸ್ತ ಚಾಚಿದ್ದಾರೆ.
ಬೆಂಗಳೂರು(ಮೇ.26): ಪವರ್ ಸ್ಟಾರ್ ಪುನೀತ್ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಗೂ ಅಪ್ಪು ಅಂದರೆ ಪಂಚಪ್ರಾಣ. ಅದರಂತೆ ಕಳೆದ ಕಲವು ತಿಂಗಳ ಹಿಂದೆ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಪ್ರೀತಿ ಹೆಸರಿನ ಪುಟ್ಟ ಅಭಿಮಾನಿ ಪುನಿತ್ ನೋಡುವ ಆಸೆ ಪಟ್ಟಿದ್ದಳು. ಅದನ್ನು ಸಾಧ್ಯವಾಗಿಸಿದ್ದ ಪುನೀತ್ ಪ್ರೀತಿಗೆ ಮಾತು ಕೊಟ್ಟಂತೆ ಸಹಾಯ ಹಸ್ತ ಚಾಚಿದ್ದಾರೆ.
ದಾವಣಗೆರೆ ಚನ್ನಗಿರಿ ಪ್ರೀತಿ 8ನೇ ಕ್ಲಾಸ್ ಓದುತಿದ್ದಾಳೆ. ತಂದೆ ಕುಮಾರ್ ಧೋಬಿ ಕೆಲಸ ಮಾಡುತ್ತಾರೆ. ಕಷ್ಟದಲ್ಲಿರುವ ಈ ಪ್ರೀತಿಗೆ ಪುನಿತ್ ಅಂದರೆ ಪ್ರಾಣ. ಆದರೆ ಈ ಪುಟ್ಟ ಹುಡುಗಿದಗೆ ಕಿಡ್ನಿ ತೊಂದರೆ ಎದುರಾಗಿದೆ. ಅದೇ ನೋವಲ್ಲೇ ನೆಚ್ಚಿನ ನಾಯಕ ಪುನಿತ್ ಅವರನ್ನು ನೋಡುವ ಆಸೆ.
ಪ್ರೀತಿ ಕೆಲ ತಿಂಗಳ ಹಿಂದೆ ಕಂಠೀರವದಲ್ಲಿ ಅಪ್ಪುರನ್ನ ಮೀಟ್ ಮಾಡಿ ಖುಷಿನೂ ಪಟ್ಟಿದ್ದಳು. ಅಷ್ಟೇ ಅಲ್ಲ, ಪ್ರೀತಿಯ ತೊಂದರೆಗೆ ಪುನೀತ್ ಸಹಾಯ ಮಾಡುವುದಾಗಿಯೂ ಹೇಳಿ ಕಳುಹಿಸಿದ್ದರು. ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ. ಪ್ರೀತಿಗೆ ಇಂದು ಬೆಳಗ್ಗೆ 7 ಗಂಟೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಯಿತು. 12 ವರ್ಷದ ಪುಟ್ಟ ಪ್ರೀತಿಗೆ ಎರಡೂ ಕಿಡ್ನಿ ಹೋಗಿವೆ. ಆದರೆ, 36 ವರ್ಷದ ತಂದೆ ಕುಮಾರ್ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದಾರೆ. ಡಾಕ್ಟರ್ ಬಲ್ಲಾಳ್ ಅವರ ವೈದ್ಯರ ತಂಡ, ಬಿಪಾಜಿಟಿವ್ ರಕ್ತ ಇರುವ ತಂದೆ ಕುಮಾರ್ ಅವರ ಕಿಡ್ನಿಯನ್ನು ಪ್ರೀತಿಗೆ ಕಸಿ ಮಾಡಿದ್ದಾರೆ.
ಓಮೆಗಾ ರಿಹ್ಯಾಬಿಲಿಟೇಷನ್ ಟ್ರಸ್ಟ್ 'ನ ಡಾಕ್ಟರ್ ಆನಂದ್ ಅವರೂ ಬಾಲಕಿ ಪ್ರೀತಿಯ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಪ್ರೀತಿಗೆ ಬೇಗ ಕಿಡ್ನಿ ಕಸಿ ಮಾಡಿ ಅವಳು ಮೊದಲಿನಂತೆ ಓಡಾಡಲಿ ಅಂತ ಜನ ಕೂಡ ಆಸೆ ಪಡುತ್ತಿದ್ದಾರೆ.
