ಪುನೀತ್ ಕಾರು ಅಪಘಾತ : ಅದೃಷ್ಟವಶಾತ್ ಪಾರು

Puneet Rajkumar Met With Accident, Actor And Driver Safe
Highlights

ಅನಂತಪುರಲ್ಲಿ ಪುನೀತ್ ರಾಜ್ ಕುಮಾರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡು ಅದೃಷ್ಟವಶಾತ್ ಪಾರಾಗಿದ್ದಾರೆ. ಸದಾಶಿವನಗರದಲ್ಲಿರುವ ಮನೆಗೆ ವಾಪಸ್ ಆಗಿದ್ದು, ಅಪಘಾತದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು :  ಅನಂತಪುರಲ್ಲಿ ಪುನೀತ್ ರಾಜ್ ಕುಮಾರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡು ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. 

ಸದಾಶಿವನಗರದಲ್ಲಿರುವ ಮನೆಗೆ ವಾಪಸ್ ಆಗಿದ್ದು, ಅಪಘಾತದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ನಾವು ಶೋಟಿಂಗ್ ಮುಗಿಸಿಕೊಂಡು ವಾಪಸ್ ಬರುವಾಗ, ಅನಂತಪುರ  ಬಳಿ ರೋಡ್ ನಲ್ಲಿ ಇದ್ದ ಗುಂಡಿ ಕಾಣಲಿಲ್ಲ. ಆಗ ಗುಂಡಿಗೆ ಕಾರಿನ ಟೈರ್ ಹೊಡೆದು ಕಾರ್ ಟೈರ್ ಓಪನ್ ಆಗಿತ್ತು. 

ಅದೃಷ್ಟವಶಾತ್ ಈ ವೇಳೆ ಯಾರಿಗೂ ಯಾವ ಸಮಸ್ಯೆಯೂ ಕೂಡ  ಆಗಲಿಲ್ಲ.  ನನ್ನ ಜೊತೆ ಇದ್ದವರಿಗೆ ಸ್ವಲ್ಪ ಮೂಗಿಗೆ ಗಾಯವಾಗಿದೆ. ಆಭಿಮಾನಿಗಳು ಆತಂಕ ಪಡುವ ಆಗತ್ಯವಿಲ್ಲ. ತಮಗೆ ಯಾವ ಸಮಸ್ಯೆಯೂ ಆಗಿಲ್ಲ, ತಾವು ಚೆನ್ನಾಗಿರುವುದಾಗಿ ಅವರು ಹೇಳಿದ್ದಾರೆ.  

ಅಲ್ಲದೇ ತಮ್ಮ ಬಗ್ಗೆ  ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ  ಎಂದು ನಟ ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದಾರೆ.

loader