Asianet Suvarna News Asianet Suvarna News

ವೈರಲ್ ಚೆಕ್: ಪುಲ್ವಾಮಾ ದಾಳಿಯ ವಿಡಿಯೋ ಬಯಲು?

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 49 ವೀರ ಯೋಧರು ಹುತಾತ್ಮ | ಈ ದಾಳಿಯ ವಿಡಿಯೋ ವೈರಲ್ | ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ಓದಿ.  

Pulwama terror attack video viral
Author
Bengaluru, First Published Feb 18, 2019, 10:09 AM IST

ಜಮ್ಮು,ಕಾಶ್ಮೀರ (ಫೆ. 18):  40 ಮಂದಿ ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಪುಲ್ವಾಮಾ ದಾಳಿಯ ಭಯಾನಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

30 ಸೆಕೆಂಡ್‌ ಇರುವ ಈ ಸಿಸಿಟಿವಿ ಕ್ಯಾಮೆರಾದ ವಿಡಿಯೋದಲ್ಲಿ ಸಿಆರ್‌ಪಿಎಫ್‌ ಯೋಧರ ಬೆಂಗಾವಲು ವಾಹನಗಳು ಚಲಿಸುತ್ತಿರುವಾಗ ಭಾರೀ ದೊಡ್ಡ ಪ್ರಮಾಣದ ಸ್ಫೋಟವೊಂದು ಸಂಭವಿಸುತ್ತದೆ. ಅದಾದ ನಂತರ, ಸುತ್ತಮುತ್ತಲಿನ ವಾತಾವರಣವೆಲ್ಲವೂ ಕಪ್ಪು ಬಣ್ಣಕ್ಕೆ ತಿರುಗುವ ಅಂಶಗಳು ದಾಖಲಾಗಿವೆ.

ಇದು ಮೇಲ್ನೋಟಕ್ಕೆ ಕಾಶ್ಮೀರದ ಪುಲ್ವಾಮಾ ಘಟನೆಯನ್ನೇ ಹೋಲುತ್ತದೆ. ಆದ ಕಾರಣ ಈ ವಿಡಿಯೋವನ್ನು ಜಮ್ಮು-ಕಾಶ್ಮೀರಿಗರು ಸೇರಿದಂತೆ ಇತರರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಆದರೆ, ವಾಸ್ತವದ ಸಂಗತಿಯೆಂದರೆ, ಈ ವಿಡಿಯೋದಲ್ಲಿರುವ ಸ್ಫೋಟ ಘಟನೆಗೂ ಪುಲ್ವಾಮಾ ದುಷ್ಕೃತ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ‘ಬೂಮ್‌ ಲೈವ್‌’ ಎಂಬ ವೈಬ್‌ಸೈಟ್‌ ಪತ್ತೆ ಮಾಡಿದೆ. 2007ರಲ್ಲಿ ಇರಾಕ್‌ನಲ್ಲಿ ಸಂಭವಿಸಿದ ಸ್ಫೋಟ ಘಟನೆಯ ಕುರಿತಾದ ವಿಡಿಯೋ ಇದಾಗಿದ್ದು, ಪುಲ್ವಾಮಾ ಘಟನೆಯಂತೆಯೇ ಕಾಣುತ್ತದೆ. ಆದರೆ, ವಾಸ್ತವವಾಗಿ ಪುಲ್ವಾಮಾ ವಿಧ್ವಂಸಕ ಘಟನೆಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎಂದು ವೆಬ್‌ಸೈಟ್‌ ಸ್ಪಷ್ಟಪಡಿಸಿದೆ.

- ವೈರಲ್ ಚೆಕ್ 

Follow Us:
Download App:
  • android
  • ios