ಕಾಲೇಜು ಶಿಕ್ಷಣ ಪೂರೈಸಿ ಉನ್ನತ ಉದ್ಯೋಗ ಪಡೆಯಬೇಕೆಂಬ ಕನಸು. ಕಷ್ಟಪಟ್ಟು ಓದಿಸಿದ ಪೋಷಕರನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬಯಕೆ. ಹೀಗೆ ಸಾಕಷ್ಟು ಕನಸುಗಳನ್ನ ಹೊತ್ತು ಕಾಲೇಜಿಗೆ ಕಾಲಿಟ್ಟ ವಿದ್ಯಾರ್ಥಿನಿ ತನ್ನ ಬದುಕಿಗೆ ಪೂರ್ಣ ವಿರಾಮ ಹಾಕಿದ್ದಾಳೆ. ಅಷ್ಟಕ್ಕೂ ಪಿಯುಸಿ ವಿದ್ಯಾರ್ಥಿನಿಯ ಕನಸಿನ ಗೋಪುರ ನುಚ್ಚು ನೂರಾಗಿದ್ದೇಗೆ? ಇಲ್ಲಿದೆ. 

ಕೋಲಾರ(ಆ.13): ಓದಿನಲ್ಲಿ ಮುಂದಿದ್ದಳು, ಶೈಕ್ಷಣಿಕ ಚಟುವಟಿಗಳಲ್ಲೂ ಆಕೆ ಚುರುಕಿನ ವಿದ್ಯಾರ್ಥಿ. ಶಾಲಾ-ಕಾಲೇಜು ಪರೀಕ್ಷೆಗಳಲ್ಲೂ ಆಕೆ ಪಾಸ್. ಆದರೆ ಬದುಕನ್ನ ಎದುರಿಸುವಲ್ಲಿ ಆಕೆ ಎಡವಿದಳು. ಇದು ಕೋಲಾರ ಜಿಲ್ಲೆಯ ಡಿಸಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯ ಕತೆ.

ಕಾಲೇಜಿನಲ್ಲಿ ಯುವಕರಿಂದ ಮಾಸಿಕ ಕಿರುಕುಳ್ಕಕ್ಕೆ ಒಳಗಾದ ಪಿಯುಸಿ ವಿದ್ಯಾರ್ಥಿನಿ ನೇಣುಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಲ್ಲೆಯ ಕೆಜಿಎಪ್ ನಗರದ ಇಟಿ ಬ್ಲಾಕ್‌ನಲ್ಲಿ ಘಟನೆ ನಡೆದಿದೆ.

ಬಂಗಾರಪೇಟೆ ಡಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗೆ, ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವಕರ ಗುಂಪು ಮಾನಸಿಕ ಕಿರುಕುಳ ನೀಡುತಿತ್ತು ಅನ್ನೋ ಆರೋಪ ಕೇಳಿಬಂದಿದೆ. ಮಾನಸಿಕ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ವಿದ್ಯಾರ್ಥಿನಿ ಸಾವಿನ ಹಿನ್ನೆಲೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಡಳಿತ‌ ಮಂಡಳಿಯಿಂದ ಸಂತಾಪ ಸೂಚಿಸಲಾಯಿತು. ಮಗಳನ್ನ ಕಳೆದುಕೊಂಡ ಪೋಷಕರ ಅಳಲು ಮುಗಿಲು ಮುಟ್ಟಿದೆ.