ಮಾ.9ರಿಂದ 27ರವರೆಗೆ ನಿರಂತರವಾಗಿ ಪರೀಕ್ಷೆಗಳು ನಡೆಯಲಿವೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. ಕಳೆದ ನ.3ರಂದು ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದ ಇಲಾಖೆ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಕೆಲ ಬದಲಾ ವಣೆಗಳನ್ನು ಮಾಡಿ ಇದೀಗ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.

ಪ್ರಸ​ಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾ.9ರಿಂದ 27ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಪರೀಕ್ಷಾ ಅವ​ಧಿ​ಯಲ್ಲಿ ಮೂರು ಭಾನುವಾರದ ರಜೆಗಳನ್ನು ಹೊರತುಪಡಿಸಿ, ಇನ್ಯಾವುದೇ ಸಾರ್ವತ್ರಿಕ ರಜೆಗಳು ದೊರೆತಿಲ್ಲ. ಮಾ.9ರಿಂದ 27ರವರೆಗೆ ನಿರಂತರವಾಗಿ ಪರೀಕ್ಷೆಗಳು ನಡೆಯಲಿವೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಕಳೆದ ನ.3ರಂದು ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದ ಇಲಾಖೆ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಕೆಲ ಬದಲಾ ವಣೆಗಳನ್ನು ಮಾಡಿ ಇದೀಗ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.


ಅಂತಿಮ ವೇಳಾಪಟ್ಟಿ ಪರೀಕ್ಷಾ ದಿನಾಂಕ ವಿಷಯ


ಮಾ. 9: ಜೀವಶಾಸ್ತ್ರ, ಇತಿಹಾಸ

ಮಾ. 10: ಎಲೆಕ್ಟ್ರಾನಿಕ್ಸ್‌, ಗಣಕ ವಿಜ್ಞಾನ

ಮಾ. 11 ತರ್ಕಶಾಸ್ತ್ರ, ಶಿಕ್ಷಣ, ಬೇಸಿಕ್‌ ಮ್ಯಾಥ್ಸ್

ಮಾ. 12 ರಜೆ

ಮಾ. 13 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ

ಮಾ. 14 ಗಣಿತ

ಮಾ. 15 ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

ಮಾ. 16 ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ

ಮಾ. 17 ಭೌತಶಾಸ್ತ್ರ

ಮಾ. 18 ಮನಃಶಾಸ್ತ್ರ

ಮಾ.19 ರಜೆ

ಮಾ. 20 ರಸಾಯನಶಾಸ್ತ್ರ, ಬಿಸಿನೆಸ್‌ ಸ್ಟಡೀಸ್‌, ಐಚ್ಛಿಕ ಕನ್ನಡ

ಮಾ. 21 ರಾಜ್ಯಶಾಸ್ತ್ರ

ಮಾ. 22 ಹಿಂದಿ, ತೆಲುಗು

ಮಾ. 23 ಕನ್ನಡ, ತಮಿಳು, ಮಲಯಾಳ, ಅರೇಬಿಕ್‌

ಮಾ. 24 ಸಂಸ್ಕೃತ, ಮರಾಠಿ, ಉರ್ದು, ಫೆಂಚ್‌

ಮಾ. 25 ಭೂಗೋಳ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ

ಮಾ. 27 ಇಂಗ್ಲಿಷ್‌