ನವಂಬರ್ 7 ಬಳಿಕ ನಿಯಮವನ್ನು ಉಲ್ಲಂಘಿಸುವವರಿಗೆ ರೂ.5 ಸಾವಿರ ದಂಡ, ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವವರಿಗೆ ರೂ.10 ಸಾವಿರ ದಂಡ ವಿಧಿಸಲಾಗುವುದು

ನವದೆಹಲಿ (ಅ.26): ಸಾರ್ವಜನಿಕವಾಗಿ ಮದ್ಯ ಸೇವನೆ ಹಾಗೂ ಇತರರಿಗೆ ತೊಂದರೆ ನೀಡುವುದರ ವಿರುದ್ಧ ದೆಹಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ನಡೆದ ಅಬಕಾರಿ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ‘ಅಬಕಾರಿ ಕಾಯ್ದೆ’ಯನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಹಾಗೂ ದಂಡ ವಿಧಿಸಲು ದೆಹಲಿ ಉಪ-ಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಾರ್ವಜನಿಕವಾಗಿ ಮದ್ಯ ಸೇವಿಸುವ ಹಾಗೂ ಜನರಿಗೆ ತೊಂದರೆಯನ್ನುಂಟು ಮಾಡುವುದರ ವಿರುದ್ಧ ಜಾಗೃತಿಯನ್ನು ಹಮ್ಮಿಕೊಳ್ಳಲಾಗುವುದು. ನವಂಬರ್ 7 ಬಳಿಕ ನಿಯಮವನ್ನು ಉಲ್ಲಂಘಿಸುವವರಿಗೆ ರೂ.5 ಸಾವಿರ ದಂಡ, ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವವರಿಗೆ ರೂ.10 ಸಾವಿರ ದಂಡ ವಿಧಿಸಲಾಗುವುದು ಮತ್ತು ಬಂಧಿಸಲಾಗುವುದು ಎಂದು ಸಿಸೋದಿಯಾ ತಿಳಿಸಿದ್ದಾರೆ.

ಜತೆಗೆ ಅಧಿಕಾರಿಗಳ ತಂಡವು ಮದ್ಯದಂಗಡಿಗಳನ್ನು ಕೂಡಾ ಪರಿಶೀಲಿಸಲಿದೆ; ಅವುಗಳ ಅನುಮತಿ ನವೀಕರಣಕೊಂಡಿದೆಯೇ, ಅವುಗಳು ಸರ್ಕಾರ ಸೂಚಿಸಿರುವಂತೆ ಸಿಸಿಟಿವಿಗಳನ್ನು ಅಳವಡಿಸಿದೆಯೇ ಎಂದೂ ಕೂಡಾ ಪರಿಶೀಲಿಸಲಿದ್ದಾರೆ.