ಇನ್ ಒಂದು ಮಾತಾಡದ್ರ ಬಾಯಾಗ್ ಬೂಟ್ ಇಡ್ತೀನಿ, ಮಾತ್ ಬೇಡಾ ನಡಿ, ಅಭಿವೃದ್ಧಿ ಮಾಡಕಾ ನಾವು ಬೇಕು, ಓಟ ಮಾತ್ರ ಇನ್ನೊಬ್ಬರಿಗೆ ಹಾಕುತ್ತೀರಿ’ ಎಂದು ಪಿಟಿ ಪರಮೇಶ್ವರ್ ನಾಯಕ್ ದರ್ಪ ತೋರಿದ ಘಟನೆಯೊಂದು ನಡೆದಿದೆ. 

ಹೂವಿನಹಡಗಲಿ: ‘ಇನ್ ಒಂದು ಮಾತಾಡದ್ರ ಬಾಯಾಗ್ ಬೂಟ್ ಇಡ್ತೀನಿ, ಮಾತ್ ಬೇಡಾ ನಡಿ, ಅಭಿವೃದ್ಧಿ ಮಾಡಕಾ ನಾವು ಬೇಕು, ಓಟ ಮಾತ್ರ ಇನ್ನೊಬ್ಬರಿಗೆ ಹಾಕುತ್ತೀರಿ’ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಬಿಜೆಪಿ ಕಾರ್ಯಕರ್ತರನ್ನು ನಿಂದಿಸಿರುವ ಘಟನೆ ಬುಧವಾರ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಮೈಲಾರ ಗ್ರಾಮ ದಲ್ಲಿ ನೂತನ ಗ್ರಾ.ಪಂ. ಕಟ್ಟಡ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಓಟು ಹಾಕಿ ದವರು ಮುಂದಕ್ಕೆ ಬನ್ನಿ ಎಂದು ಶಾಸಕರು ಕರೆದ ವೇಳೆ ಗಲಾಟೆಯಾಗಿದೆ.

ಈ ಹಿಂದೆಯೂ ಕೂಡ ಇಂತಹ ಅನೇಕ ಘಟನೆಗಳು ನಡೆದಿದ್ದು ಇದೀಗ ಮತ್ತೊಮ್ಮೆ ಪರಮೇಶ್ವರ್ ನಾಯಕ್ ಅವರು ನಿಂದಿಸಿರುವ ಘಟನೆ ಬೆಳಕಿಗೆ ಬಂದಿದೆ.