ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸೈಕೋಪಾತ್ ಸುದ್ದಿಯಾಗಿತ್ತು. ಇದೀಗ  ಅದೇ ರೀತಿಯಾದ  ಇನ್ನೋರ್ವ ಸೈಕೋಪಾತ್ ಎಂಟ್ರಿಯಾಗಿದ್ದಾನೆ.

ಬೆಂಗಳೂರು (ಜ.17): ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಸೈಕೋಪಾತ್ ಸುದ್ದಿಯಾಗಿತ್ತು. ಇದೀಗ ಅದೇ ರೀತಿಯಾದ ಇನ್ನೋರ್ವ ಸೈಕೋಪಾತ್ ಎಂಟ್ರಿಯಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಬೈಯಪ್ಪನಹಳ್ಳಿಯ ಮೆಟ್ರೋ ಕ್ವಾಟ್ರಸ್’ಗೆ ನುಗ್ಗಿ ಭಯ ಹುಟ್ಟಿಸಿದ್ದಾನೆ. ಮೂವರು ಯುವತಿಯರು ವಾಸವಿದ್ದ ಕ್ವಾಟ್ರಸ್’ಗೆ ನುಗ್ಗಿ ಈ ಸೈಕೋಪಾತ್ ವಿಚಿತ್ರವಾಗಿ ವರ್ತಿಸಿದ್ದಾನೆ.

ಜನವರಿ 10ನೇ ತಾರಿಕು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕ್ವಾಟ್ರಸ್’ಗೆ ನುಗ್ಗಿರುವುದು ಇದೀಗ ಬೆಳಕಿಗೆ ಬಂದಿದೆ.

ಯುವತಿಯರು ಮಲಗಿದ್ದಾಗ ಅವರ ಬಳಿ ದೆವ್ವದಂತೆ ಕತ್ತಲ ಕೋಣೆಯಲ್ಲಿ ಚಾಕು ಹಿಡಿದು ನಿಂತಿದ್ದ. ಈ ವೇಳೆ ಆ ಮೂವರು ಯುವತಿಯರು ಆತನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ತಾನು ವಾಚ್’ಮನ್ ಎಂದು ಹೇಳಿಕೊಂಡಿದ್ದು, ನಂತರ ತಾನು ಕಳ್ಳ ಎಂದು ಹೇಳಿದ್ದಾನೆ. ಅಲ್ಲದೇ ಈ ವೇಳೆ ಯುವತಿಯರ ಒಳ ಉಡುಪುಗಳನ್ನು ತೆಗೆದುಕೊಂಡು ಅಸಹ್ಯವಾಗಿ ವರ್ತಿಸಿದ್ದಾನೆ.