ಮಹಾರಾಣಿ ಕಾಲೇಜು ಹಾಸ್ಟೆಲ್ ಸುತ್ತಮುತ್ತ ಬೆತ್ತೆಲೆಯಾಗಿ ಓಡಾಡ್ತಿದ್ದ ಸೈಕೋ ಕೃಷ್ಣನನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ರೇಸ್ ಕೋರ್ಸ್‌ನಲ್ಲಿ ಕುದುರೆ ಮಾಲಿಷ್ ಮಾಡುತ್ತಿದ್ದ, ಈತ ಮಹಾರಾಣಿ ಕಾಲೇಜು ಹಾಸ್ಟೆಲ್ ಸುತ್ತಮುತ್ತ ಬೆತ್ತಲೆಯಾಗಿ ಓಡಾಡುತ್ತಾ, ವಿದ್ಯಾರ್ಥಿನಿಯರ ಒಳಉಡುಪುಗಳನ್ನು ಕದಿಯುತ್ತಿದ್ದ.

ಬೆಂಗಳೂರು(ಮಾ.22): ಬೆಂಗಳೂರಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ಸೈಕೋನನ್ನು ಬಂಧಿಸಲಾಗಿದೆ.

ಮಹಾರಾಣಿ ಕಾಲೇಜು ಹಾಸ್ಟೆಲ್ ಸುತ್ತಮುತ್ತ ಬೆತ್ತೆಲೆಯಾಗಿ ಓಡಾಡ್ತಿದ್ದ ಸೈಕೋ ಕೃಷ್ಣನನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ರೇಸ್ ಕೋರ್ಸ್‌ನಲ್ಲಿ ಕುದುರೆ ಮಾಲಿಷ್ ಮಾಡುತ್ತಿದ್ದ, ಈತ ಮಹಾರಾಣಿ ಕಾಲೇಜು ಹಾಸ್ಟೆಲ್ ಸುತ್ತಮುತ್ತ ಬೆತ್ತಲೆಯಾಗಿ ಓಡಾಡುತ್ತಾ, ವಿದ್ಯಾರ್ಥಿನಿಯರ ಒಳಉಡುಪುಗಳನ್ನು ಕದಿಯುತ್ತಿದ್ದ.

ಇಷ್ಟೇ ಅಲ್ಲದೆ ಮಹಿಳೆಯರ ಒಳ ಉಡುಪುಗಳನ್ನು ಧರಸಿಕೊಂಡು ವಿಕೃತತೆ ಮೆರೆಯುತ್ತಿದ್ದ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರಿಂದ ವಿದ್ಯಾರ್ಥಿನಿಯರು ಭಯಭೀತಗೊಂಡಿದ್ದರು.