ಕೊಪ್ಪಳ(ಸೆ.24): ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಯನ್ನು 'ಸಾಯಲಿ ಬಿಡಿ ನಾವೇನು ಮಾಡೋಕೆ ಆಗುತ್ತದೆ ಅಂತ ಪಿಎಸ್​ಐ ಒಬ್ಬರು ಕೀಳು ಮಟ್ಟದಲ್ಲಿ ಮಾತನಾಡಿದ ಪಿಎಸ್​​ಐ ಜಯಪ್ರಕಾಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ತ್ಯಾಗರಾಜನ್ ಅವರು ಅಮಾನತ್ತು ಮಾಡಿ ಆದೇಶಿಸಿದ್ದಾರೆ.

Add Asianetnews Kannada as a Preferred SourcegooglePreferred

ಶಾಸಕರ ವಿರುದ್ಧ ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದಕ್ಕೆ ಅನ್ಸಾರಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ಆಡಿಯೋವನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು.

ಕೊಪ್ಪಳ ತಾಲೂಕಿನ ಮುನಿರಾಬಾದ ಪಿಎಸ್​​ಐ ಜಯಪ್ರಕಾಶ್​ ಶಾಸಕ ಇಕ್ಬಾಲ್ ಅನ್ಸಾರಿಗೆ ಸಾಯಲಿ ಬಿಡಿ ನಾವೇನು ಮಾಡಲು ಆಗುತ್ತದೆ ಅಂತ ಮಾತಾಡಿದ್ದಾರಂತೆ. ಅನ್ಸಾರಿ ಬಗ್ಗೆ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಒಣ ಬಳ್ಳಾರಿ ಗ್ರಾಮದಲ್ಲಿ ಕೋಕೋ ಪಂದ್ಯಾವಾಳಿ ಆಯೋಜನೆ ಮಾಡಲಾಗಿತ್ತು.

ಈ ವೇಳೆ ಒಣಬಳ್ಳಾರಿ ಹಾಗೂ ಇಂದರಗಿ ಗ್ರಾಮಸ್ಥರ ಮಧ್ಯೆ ಶಾಸಕ ಇಕ್ಬಾಲ್ ಅನ್ಸಾರಿ ಎದುರೇ ಗಲಾಟೆ ನಡೆದಿತ್ತು. ಆಗ ಅಲ್ಲಿದ್ದ ಗ್ರಾಮಸ್ಥರು ಮುನಿರಾಬಾದ ಪಿಎಸ್​ಐ ಜಯಪ್ರಕಾಶ್​ಗೆ ಫೋನ್ ಮಾಡಿ ಗಲಾಟೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪಿಎಸ್​ಐ ಜಯಪ್ರಕಾಶ್​ ಮಾತ್ರ ಇಕ್ಬಾಲ್ ಅನ್ಸಾರಿ ಸಾಯಲಿ ಬಿಡಿ, ನಾವೇನು ಮಾಡಲು ಆಗುತ್ತದೆ ಅಂತ ಪ್ರತಿಕ್ರಿಯಿಸಿದ್ದರಂತೆ.