ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿ ಪಿಎಸ್​​ಐ ಶಿವಶಂಕರ ಮುಕರಿಯ ದರ್ಪ ಬಯಲಾಗಿದೆ. ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಪಿಎಸ್​​ಐ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿವೈಎಸ್​ಪಿ ನೇತೃತ್ವದಲ್ಲಿ  ತನಿಖೆ ನಡೆಯಲಿದೆ.

ಬೆಳಗಾವಿ (ಮಾ.19): ಬಾರ್‌ ಮ್ಯಾನೇಜರ್‌ ಮೇಲೆ ಪಿಎಸ್‌'ಐ ಯದ್ವಾತದ್ವಾ ಹಲ್ಲೆ ನಡೆಸಿ ದರ್ಪ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆಗೆ ಎಸ್ಪಿ ರವಿಕಾಂತೇಗೌಡ ಆದೇಶಿಸಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿ ಪಿಎಸ್​​ಐ ಶಿವಶಂಕರ ಮುಕರಿಯ ದರ್ಪ ಬಯಲಾಗಿದೆ. ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಪಿಎಸ್​​ಐ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ.

ಮಾರ್ಚ್ 13 ರಂದು ಬೆಳಗಾವಿಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಮದ್ಯ ನಿಷೇಧ ಇತ್ತು. ಅಂದು ರಾತ್ರಿ ಕುಡಚಿಯ ಶಿವಶಕ್ತಿ ಬಾರ್‌'ಗೆ ನುಗ್ಗಿದ ಪಿಎಸ್‌'ಐ ಶಿವಶಂಕರ, ಪೇದೆಗಳಾದ ಪೂಜಾರಿ, ಎಚ್‌.ಡಿ ಬೋಜನ್ನವರ್,​​ ಮ್ಯಾನೇಜರ್‌ ಅಜಿತ್​​​​ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ.

ನಿಷೇಧ ಇದ್ದರೂ ಮದ್ಯ ಹಾಗೂ ಮಾಮೂಲಿ ನೀಡುವಂತೆ ಕೇಳಿದ್ದಾರೆ. ಆದರೆ ಮದ್ಯ ನೀಡಲು ನಿರಾಕರಿಸಿದ್ದರಿಂದ ಪಿಎಸ್​​​'ಐ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.