ಪರ್ರಿಕರ್ ಮಾಡಿರುವ ಆರೋಪಕ್ಕೆ ಸರಿಯಾದ ಪುರಾವೆಯಿದ್ದರೆ ನಮ್ಮನ್ನು ಕೋರ್ಟ್ ಗೆ ಎಳೆಯಲಿ ಎಂದು ಕಾಂಗ್ರೆಸ್ ಸವಾಲಾಕಿದೆ.
ನವದೆಹಲಿ (ಅ.11): ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಹೆಲಿಕ್ಯಾಪ್ಟರ್ ಮತ್ತು ಸಬ್ ಮರಿನ್ ಒಪ್ಪಂದದಲ್ಲಿ ಕಾಂಗ್ರೆಸ್ ಪಕ್ಷವು ದಲ್ಲಾಳಿಯಾಗಿತ್ತು ಎಂದ ಮನೋಹರ್ ಪರ್ರಿಕರ್ ಹೇಳಿಕೆಯು ಕಾಂಗ್ರೆಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪರ್ರಿಕರ್ ಮಾಡಿರುವ ಆರೋಪಕ್ಕೆ ಸರಿಯಾದ ಪುರಾವೆಯಿದ್ದರೆ ನಮ್ಮನ್ನು ಕೋರ್ಟ್ ಗೆ ಎಳೆಯಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
“ಒಂದು ವೇಳೆ ಕಾಂಗ್ರೆಸ್ ದಲ್ಲಾಳಿಯಾಗಿದ್ದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ. ಯುಪಿಎ ಅವಧಿಯಲ್ಲಿ ರೂ.1.7 ಲಕ್ಷ ಕೋಟಿ ಹಗರಣವಾಗಿದೆ ಎಂದ ಪರ್ರಿಕರ್ ಆರೋಪವು ನಿಜವಾಗಿದ್ದರೆ ನಮ್ಮ ಮೇಲೆ ಎಫ್’ಐಆರ್ ದಾಖಲಿಸಲಿ. ಇದು ಪೇಯ್ಡ್ ಮೀಡಿಯಾ ಸುದ್ಧಿಯಾಗಿದ್ದು ಹಾಗಾಗಿ ಯಾರೂ ಕೂಡಾ ಅವರನ್ನು ಪ್ರಶ್ನಿಸುವುದಿಲ್ಲ. ಆಧಾರವಿದ್ದರೆ ಮಾತನಾಡಲಿ ಇಲ್ಲದಿದ್ದರೆ ಸುಮ್ಮನಿರಲಿ ಎಂದು ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
