ಮಂಡ್ಯ (ಸೆ.30): ಸುಪ್ರೀಂ ಕೋರ್ಟ್ ಆದೇಶ ಹೊರ ಬರುತ್ತಿದ್ದಂತೆಯೇ ಕಾವೇರಿ ಕೊಳ್ಳದಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ.

ಮಂಡ್ಯದಲ್ಲಿ ಪ್ರತಿಭಟನೆಗಳು ಭುಗಿಲೆದಿದ್ದು, ಸುಪ್ರೀಂ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಇದೊಂದು ಮರಣ ಶಾಸನ, ಮುಂದಿನ ದಿನಗಳಲ್ಲಿ ನಮಗೆ ನೀರು ಸಿಗಲ್ಲ. ಎಂದು ಘೋಷಣೆ ಕೂಗಿದ್ದಾರೆ.

 ಮಂಡ್ಯ ಜನರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಕಾವೇರಿ ಕೊಳ್ಳದಲ್ಲಿನ ರೈತರ ಬೆಳೆಗಳು ಒಣಗಿ ಹೋಗುತ್ತಿವೆ. ಬೆಳೆಗಳಿಗೆ ನೀರು ನಿಲ್ಲಿಸಿ 15 ದಿನಗಳಾಗಿದ್ದು, ಇನ್ನೊಂದು ವಾರದಲ್ಲಿ ನೀರು ಸಿಗದಿದ್ದಲ್ಲಿ, ಬೆಳೆಗಳು ಸಂಪೂರ್ಣ ಒಣಗಿ ಹೋಗುದಂತೂ ಖಚಿತ. ಇನ್ನೂ ನಮಗೆ ಬೊಗಸೆ ನೀರೇ ಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಸಾಂದ್ರಭಿಕ ಚಿತ್ರ)