ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರದಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗಿದೆ, ದೈನಂದಿನ ವ್ಯವಹಾರಕ್ಕೆ  ಜನರು ಪರದಾಡುವಂತಾಗಿದೆ ಎಂದು  ಆಕ್ರೋಶ

ವಿಜಯಪುರ (ನ.09): ವಿಜಯಪುರದಲ್ಲಿ 500, 1000 ಸಾವಿರ ನೋಟು ಚಲಾವಣೆ ರದ್ದುಪಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ವಿನೂತನ ಪ್ರತಿಭಟನೆ ಮಾಡಾಲಾಯ್ತು. ಮುದ್ದೆಬಿಹಾಳ ತಾಲೂಕು ತಾಳಿಕೋಟೆ ಪಟ್ಟಣದಲ್ಲಿ ಸಾರ್ವಜನಿಕರು ಕತ್ತೆಗಳಿಗೆ 500 ರೂಪಾಯಿ ನೋಟ್​ ತಿನ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರದಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗಿದೆ. ದೈನಂದಿನ ವ್ಯವಹಾರಕ್ಕೆ ಜನರು ಪರದಾಡುವಂತಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.